ಕ.ರ.ವೇ ಹೋರಾಟಗಳು
|
|
೨೦೦೮ ರಲ್ಲಿ ಆರಂಭವಾದ ಈ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆಯು ನಿರಂತರವಾಗಿ ನಡೆಸಿಕೊಂಡು, ಹಲವು ಪ್ರತಿಭಟನಾ ನಡಿಗೆಗಳು, ಸರ್ಕಾರಕ್ಕೆ ಮತ್ತು ವಿಮಾನ ನಿಲ್ದಾಣದ ಮುಖ್ಯ ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸುವಿಕೆ ಹಾಗೂ ಇತರೆ ಹಲವು ಹೋರಾಟಗಳನ್ನು ಮಾಡಿದ್ದರ ಫಲವಾಗಿ ಇಂದು ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ "ನಾಡಪ್ರಭು ಕೆಂಪೇಗೌಡರ" ಹೆಸರನ್ನು ಇಡಲು ಸರ್ಕಾರ ತೀರ್ಮಾನಕ್ಕೆ ಬಂದಿದೆ. ಇಂದು ಸಮಸ್ತ ಕನ್ನಡಿಗರಿಗೆ ಸಂದ ಜಯ. |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
ಕೇಂದ್ರಸರ್ಕಾರಿ ಪ್ರಾಯೋಜಿತ ಹಿಂದಿ ಹೇರಿಕೆಯಿಂದಾಗಿ ಕನ್ನಡನುಡಿ ಮತ್ತು ಕನ್ನಡಿಗರ ಬದುಕುಗಳು ಅಳಿಸಿಹೋಗುತ್ತಿರುವುದನ್ನು ಕಂಡುಕೊಂಡಿದ್ದು, ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡಿಗರ ಬದುಕಿಗೆ ಗ್ರಹಣದಂತೆ ಆವರಿಸಿರುವ ಈ ಹಿಂದಿ ಕೊಳೆಯನ್ನು ತೊಡೆಯಲು ದೃಡ ನಿಶ್ಚಯ ಮಾಡಿದ್ದು, ಕನ್ನಡಿಗರಲ್ಲಿ ಜಾಗೃತಿ ಹುಟ್ಟುಹಾಕುತ್ತಿದೆ ಹಾಗೂ ೨೦೦೬ ರಿಂದ ನಿರಂತರವಾಗಿ ವ್ಯವಸ್ಥಿತ ಹಿಂದಿ ಹೇರಿಕೆ ವಿರುದ್ಧ ಹೋರಾಡುತ್ತಿದ್ದು...
|
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ಆರಂಭದಲ್ಲಿ ನಾಡಿನ ಗಣ್ಯ ಸಾಹಿತಿ ವಲಯಕ್ಕೆ ಮಾತ್ರಾ ಸೀಮಿತವಾಗಿದ್ದ ಶಾಸ್ತ್ರೀಯ ಭಾಷಾ ಸ್ಥಾನಮಾನದ ಹಕ್ಕೊತ್ತಾಯವನ್ನು ನಾಡಿನ ಸ್ವಾಭಿಮಾನದ ಚಳವಳಿಯನ್ನಾಗಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಇತಿಹಾಸದಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಸಾವಿರಾರು ಕನ್ನಡಿಗರ ಜಾಥಾವನ್ನು ಸಂಘಟಿಸಲಾಗಿತ್ತು... |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
ಕನ್ನಡಿಗರ ಹಾಗೂ ನಾಡಿನ ಏಳಿಗೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಹರಿಯುವ ಅನೇಕ ನದಿಗಳ ನೀರು ಹಂಚಿಕೆ ಕುರಿತ ವಿವಾದಗಳು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಕರವೇ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇದರಲ್ಲಿ ಪ್ರಮುಖ ಹೋರಾಟಗಳಲ್ಲೊಂದಾದ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಕುರುತು ನಾವು ನಡೆಸಿದ ಹೋರಾಟಗಳ...
|
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ಒಂದು ನಾಡಿನ ಜನಜೀವನದ ಬಹುಮುಖ್ಯ ಅಂಗ ಆ ನಾಡಿನ ಮನರಂಜನಾ ಮಾಧ್ಯಮ ಕ್ಷೇತ್ರ. ಕನ್ನಡಿಗರ ಮನರಂಜನೆ ಕನ್ನಡದಲ್ಲಿ ಎನ್ನುವುದು ಸ್ಪಟಿಕದಷ್ಟು ಸ್ಪಷ್ಟ. ಕನ್ನಡ ಮನರಂಜನಾ ಕ್ಷೇತ್ರಗಳ ಸಮಸ್ಯೆಗಳಿಗೆ ಸ್ಪಂದಿಸಿದ ಕರ್ನಾಟಕ ರಕ್ಷಣಾ ವೇದಿಕೆ ಈ ನಿಟ್ಟಿನಲ್ಲಿ ನಡೆಸಿದ ಹೋರಾಟಗಳು... |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ಕನ್ನಡದ ಸಾರ್ವಭೌಮತ್ವ ಇರುವುದು ನಾಡಿನ ಯಾವುದೇ ಭಾಗದಲ್ಲಿರುವ ವ್ಯವಸ್ಥೆಗಳು ನಾಡಿನ ಅತಿ ಸಾಮಾನ್ಯ ಕನ್ನಡಿಗನೊಬ್ಬನಿಗೂ ತೊಡಕಾಗದಂತೆ ಇರುವುದರಲ್ಲಿ. ಕನ್ನಡನಾಡಲ್ಲಿ ಕನ್ನಡಿಗ, ನಾಡಿನ ಎಲ್ಲ ಕಛೇರಿ, ಅಂಗಡಿ, ಮುಂಗಟ್ಟು, ಮಳಿಗೆ, ನ್ಯಾಯಾಲಯ, ವಿಮಾನ-ರೈಲು-ಬಸ್ ನಿಲ್ದಾಣ... ಹೀಗೆ ಎಲ್ಲಿಯೇ ಆದರೂ...
|
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ನಾಡಿನ ರೈತ ಸಮುದಾಯದ ಸಮಸ್ಯೆಗಳಿಗೆ ಸದಾ ಕರ್ನಾಟಕ ರಕ್ಷಣಾ ವೇದಿಕೆಯು ಸ್ಪಂದಿಸುತ್ತಿದ್ದು ರೈತಪರವಾದ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಅಂತರರಾಜ್ಯ ನದಿ ಹಂಚಿಕೆಯಾಗಿರಲೀ, ನೀರಾವರಿ ಯೋಜನೆಗಳ ಅನುಷ್ಠಾನದ ವಿಷಯವಾಗಿರಲೀ ಮಣ್ಣಿನ ಮಕ್ಕಳ ಹಿತ ಕಾಯಲು ಕರ್ನಾಟಕ ರಕ್ಷಣಾ ವೇದಿಕೆ ಅನೇಕಾನೇಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದು... |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ನಮ್ಮ ಕನ್ನಡನಾಡು ಸದಾ ಪ್ರಕೃತಿ ಮಾತೆಯಿಂದ ಹರಸಲ್ಪಟ್ಟ ಸಮೃದ್ಧವಾದ ನದಿ ಹರಿವಿನ ನಾಡು. ಇಲ್ಲಿನ ನೆಲವನ್ನು ಹಸನು ಮಾಡಲೆಂದೆ ಧರೆಗೆ ಒಂದಲ್ಲ ಹತ್ತಾರು ನದಿಗಳು ಹರಿದುಬಂದಿವೆ. ಆದರೆ ಕನ್ನಡಿಗರ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಮ್ಮ ತಟ್ಟೆಯಲ್ಲಿನ ರೊಟ್ಟಿಗೆ ನೆರೆಯ ರಾಜ್ಯಗಳು ಕೈ ಹಾಕಲು ಮುಂದಾಗಿವೆ. ಈ ಕಾರಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಾಡಿನ ನೀರಾವರಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ, ನಮ್ಮ ಸರ್ಕಾರಗಳನ್ನು ಎಚ್ಚರಿಸುವ ಕೆಲಸವನ್ನು ತನ್ನ ದಿಟ್ಟ ಹೋರಾಟಗಳಿಂದ ಮಾಡುತ್ತಲೇ ಬಂದಿದೆ... |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ಕನ್ನಡಿಗರ, ಕನ್ನಡ ನಾಡಿನ ಏಳಿಗೆಯನ್ನೇ ಪರಮಗುರಿಯನ್ನಾಗಿಸಿ ನೋಡಿದಾಗ ನಾಡಿನ ಉದ್ದಿಮೆಗಳು ಮತ್ತು ಉದ್ಯೋಗಾವಕಾಶಗಳಿಗಿರುವ ಮಹತ್ವ ಅರಿವಿಗೆ ಬರುತ್ತದೆ. ನಾಡಿನ ಆರ್ಥಿಕತೆ, ನಮ್ಮ ಜನರ ಅನ್ನದ ಪ್ರಶ್ನೆ ಬಗೆಹರಿದಾಗಲೇ ಏಳಿಗೆ ಕಾಣುವುದು. ಹಾಗಾದರೆ ನಮ್ಮೆಲ್ಲರ ಏಳಿಗೆಯ ಮೂಲ ಅಡಗಿರುವುದೇ ಉತ್ಪಾದನಾ ಚಟುವಟಿಕೆಗಳು, ಆರ್ಥಿಕ ಚಟುವಟಿಕೆಗಳು ಹೆಚ್ಚಿದಾಗ. ಆ ಕಾರಣದಿಂದಾಗಿ ಕರ್ನಾಟಕ ರಕ್ಷಣಾ ವೇದಿಕೆ ನಾಡಿನ ಉದ್ದಿಮೆಗಳ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದು ಇವುಗಳಿಗೆ ಒದಗುವ ಕುತ್ತನ್ನು ನಿವಾರಿಸಲು ಸದಾ ಶ್ರಮಿಸುತ್ತಾ, ಉದ್ಯೋಗಕ್ಕೆ ಸಂಬಂಧಪಟ್ಟ ಹಲವಾರು ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇವೆ...
|
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
ಗುಲ್ಬರ್ಗಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಉರ್ದು ಭಾಷೆಗೆ ಎರಡನೆ ಆಡಳಿತ ಭಾಷೆಯ ಸ್ಥಾನ ನೀಡುವ ಬಗ್ಗೆ ಕೈಗೊಂಡ ನಿರ್ಣಯವನ್ನು ಸರ್ಕಾರ ಪರಿಗಣಿಸಬಾರದು...
|
| ಮುಂದೆ ಓದಿ... |