ಫೆ. ೧೮ ರಂದು ಗಡಿ ಪ್ರದೇಶವಾದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕ ಉದ್ಘಾಟನೆಯಾಯಿತು. ತಾಲೂಕು ಘಟಕವನ್ನು ಉದ್ಘಾಟಿಸಿದವರು ಪ್ರಭು ಬಸಪ್ಪ ಸ್ವಾಮೀಜಿ (ಅಥಣಿ ತಾಲೂಕು). ಉದ್ಘಾಟನೆ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ರಾಜೀವ್ ತೋಪಣ್ಣ ಉಪಸ್ಥಿತರಿದ್ದರು.

ಉದ್ಘಾಟನೆಗೂ ಮುನ್ನ ಜಾಥಾ ಏರ್ಪಟ್ಟಿತ್ತು. ೩೦೦೦ ಸಾವಿರಕ್ಕು ಹೆಚ್ಚು ಜನರನ್ನೊಳಗೊಂಡ ಜಾಥಾದಲ್ಲಿ ಶೇ. ೪೦ ರಷ್ಟು ಜನ ಮರಾಠಿಗರು ಎಂಬುದು ಗಮನಾರ್ಹ ಸಂಗತಿ. ಜಾಥಾದಲ್ಲಿ ಮೊಳಗಿದ್ದು “ಕಲೀರಪ್ಪ ಕಲೀರಿ ಕನ್ನಡ ಕಲೀರಿ” ಎಂಬ ಘೋಷಣೆ. ನಂತರ ಗಡಿ ಭಾಗವಾದ ಖಾನಪುರದಲ್ಲಿ ಮೊದಲ ಬಾರಿಗೆ ಕರ್ನಾಟಕದ ಬಾವುಟ ಹಾರಾಡಿತು.

1