ನಾಡದ್ರೋಹಿಗಳಾದ ಬೆಳಗಾವಿ ಪಾಲಿಕೆಯ ಮೇಯರ್-ಉಪಮೇಯರ್ ಸದಸ್ಯತ್ವವನ್ನು ರದ್ದುಗೊಳಿಸದೇ, ನಗರ ಪಾಲಿಕೆಯನ್ನೂ ವಿಸರ್ಜಿಸದೇ ರಾಜ್ಯ ಸರ್ಕಾರವು ಮತ್ತೊಮ್ಮೆ ನೋಟೀಸ್ ಕಳಿಸುವ ಕಣ್ಣೊರೆಸುವ ತಂತ್ರವನ್ನೇ ಮುಂದುವರೆಸಿದ್ದು, ನಾಡದ್ರೋಹಿಗಳ ವಿರುದ್ಧ ಯಾವುದೇ ಕಠಿಣ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಸರ್ಕಾರದ ಈ ಬೇಜವಾಬ್ದಾರಿ ಧೋರಣೆಯನ್ನು ಖಂಡಿಸಿ ನಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದೇವೆ.

ಕಳೆದ ೫ ದಿನಗಳಿಂದ ಬೆಳಗಾವಿಯಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದು, ನೆನ್ನೆ (ನವೆಂಬರ್ ೨೪, ೨೦೧೧ ರಂದು) ಸಂಜೆ ಬೆಳಗಾವಿಯಲ್ಲಿ ರಾಜ್ಯ ಸರ್ಕಾರದ ಪ್ರತಿಕೃತಿಯನ್ನು ದಹಿಸುವ ಮೂಲಕ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆವು.

ನೆನ್ನೆಯ ಹೋರಾಟ ಮತ್ತು ಉಪವಾಸ ಸತ್ಯಾಗ್ರಹದ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

NNews_KPNNews_SKNNews_PV