ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಹೆಚ್. ಡಿ.ಕುಮಾರಸ್ವಾಮಿರವರು ಹಾಗೂ ಉಪಮುಖ್ಯಮಂತ್ರಿ ಗೃಹಸಚಿವರಾದ ಶ್ರೀ ಜಿ.ಪರಮೇಶ್ವರ್ ರವರನ್ನು ವಿಧಾನಸೌಧದಲ್ಲಿ ಬೇಟಿ ಮಾಡಿ ನವೆಂಬರ್ ಒಂದರಂದು ಬೆಳಗಾವಿ ಜಿಲ್ಲೆಯಲ್ಲಿ ನಾಡದ್ರೋಹಿ ಎಂಇಎಸ್ ನಡೆಸಲು ಉದ್ದೇಶಿಸಿರುವ ಕರಾಳದಿನವನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಎಂದು ಬೆಳಗಾವಿ ಜಿಲ್ಲಾಡಳಿತ ಹಾಗೂ ಗೃಹ ಇಲಾಖೆಗೆ ನಿರ್ದೇಶನ ನೀಡಿ ಕರ್ನಾಟಕದಲ್ಲಿ ಎಂಇಎಸ್ ಪುಂಡಾಟಿಕೆಯನ್ನು ನಿಲ್ಲಿಸಲು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.