ಬೆಂಗಳೂರು ಮೆಟ್ರೋ ನಡೆಸುತ್ತಿರುವ ಹಿಂದಿ ಹೇರಿಕೆಯನ್ನು ವಿರೋಧಿಸಿ ಹಾಗು ಬೆಂಗಳೂರು ಮೆಟ್ರೋನಲ್ಲಿರುವ ಉದ್ಯೋಗಗಳನ್ನ ಕನ್ನಡಿಗರಿಗೇ ನೀಡಬೇಕೆಂದು ಆಗ್ರಹಿಸಿ ನಾರಾಯಣಗೌಡರ ನೇತೃತ್ವದಲ್ಲಿ ಕರವೇಯ ಒಂದು ನಿಯೋಗ ಇಂದು ಬೆಂಗಳೂರು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರನ್ನ ಭೇಟಿ ಮಾಡಿತು. ಅತೀ ತುರ್ತಾಗಿ ರಾಜ್ಯ ಸರಕಾರದ ಜೊತೆ ಇದರ ಬಗ್ಗೆ ಮಾತುಕತೆ ನಡೆಸಿ ಕನ್ನಡ ಪರವಾದ ನಿರ್ಧಾರ ತೆಗೆದುಕೊಳ್ಳುವೆವು ಎಂಬ ಆಶ್ವಾಸನೆಯನ್ನ ಬೆಂಗಳೂರು ಮೆಟ್ರೋದ ಆಡಳಿತ ಮಂಡಳಿ ನೀಡಿದೆ. ಕೆಲವು ದಿನಗಳ ಸಮಯ ಅವರಿಗೆ ನೀಡಿದ್ದು ಬೆಂಗಳೂರು ಮೆಟ್ರೋನವರು ಕನ್ನಡ – ಕನ್ನಡಿಗ ಪರವಾದ ಕ್ರಮಗಳನ್ನ ಕೈಗೊಳ್ಳದಿದ್ದರೆ ಮುಂದೆ ಉಗ್ರವಾದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಬೆಂಗಳೂರು ಮೆಟ್ರೋದ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ.

 

Photo

Manavi 1

Manavi 2

Manavi 3

Manavi 4

Manavi 5