ಹೋರಾಟಗಳು

10 May 2012

ಬೆಳಗಾವಿಯಲ್ಲಿ ಕನ್ನಡ ಬಾವುಟ ಸಟ್ಟುಹಾಕಿದ್ದನ್ನು ಖಂಡಿಸಿ ಬೀದರ್ ನಲ್ಲಿ ಪ್ರತಿಭಟನೆ

ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಬಾವುಟವನ್ನು ಕೆಲವು ಕಿಡಿಗೇಡಿಗಳು ಸುಟ್ಟು ಹಾಕಿದ್ದನ್ನು ಖಂಡಿಸುತ್ತ, ಬೀದರ್ ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತರು ೦೫-೦೫-೨೦೧೨ ರಂದು ಪ್ರತಿಭಟನೆ ನಡೆಸಿದರು. ಇದರ ವರದಿಗಳನ್ನು ಇಲ್ಲಿ ನೋಡಿ.

ಮುಂದೆ ಓದಿ...
05 May 2012

ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಹೊರಟಿರುವ ಎಂ.ಇ.ಎಸ್. ನಡೆಯನ್ನು ತಡೆಯಲು ಸಹಸ್ರಾರು ಕ.ರ.ವೇ. ಕಾರ್ಯಕರ್ತರು ಬೆಳಗಾವಿಗೆ – ಟಿ.ಎ. ನಾರಾಯಣ ಗೌಡರು

ಎಂ.ಇ.ಎಸ್. ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಮುಂದಾಗಿದೆ ಹಾಗು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂದು ಹುನ್ನಾರ ನಡೆಸುತ್ತಿದೆ. ಇದನ್ನು ತಡೆಯಲು ಕ.ರ.ವೇ. ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಬೆಳಗಾವಿಗೆ ತೆರಳಲಿದ್ದಾರೆ ಎಂದು ನಮ್ಮ ರಾಜ್ಯಧ್ಯಕ್ಷರಾದ  ಟಿ.ಎ. ನಾರಾಯಣ ಗೌಡರು ಹೇಳಿದರು. ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ -

ಮುಂದೆ ಓದಿ...
04 May 2012

ಬೆಳಗಾವಿಯಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ – ಕರವೇಯಿಂದ ಪ್ರತಿಭಟನೆ

ಬೆಳಗಾವಿಯಲ್ಲಿ ಕಿಡಿಗೇಡಿಗಳು ಕನ್ನಡದ ಬಾವುಟಕ್ಕೆ ಬೆಂಕಿ ಹಾಕಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಕರ್ತರೊಡನೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದೆವು. ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಮುಂದೆ ಓದಿ...
15 Apr 2012

ಬೆಳಗಾವಿ ಕುರಿತು ಎಂ.ಇ.ಎಸ್. ಗೆ ಮಹಾರಾಷ್ಟ್ರ ಸರ್ಕಾರದ ಬೆಂಬಲ ಖಂಡಿಸಿ ಪ್ರತಿಭಟನೆ

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಪಿತೂರಿ ನಡೆಸಿ ಮುಂಬಯಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ನಾಡದ್ರೋಹಿ ಎಂ.ಇ.ಎಸ್. ಸಂಘಟನೆಗೆ ಮಹಾರಾಷ್ಟ್ರ ಸರ್ಕಾರದ ಶಾಸಕರು ಬೆಂಬಲ ಸೂಚಿಸಿದ್ದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ನೆನ್ನೆ ಏಪ್ರಿಲ್ ೧೪, ೨೦೧೨ – ಶನಿವಾರದಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಪ್ರತಿಭಟನೆ ವೇಳೆ ಗಡಿ ಭಾಗದಲ್ಲಿ ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡಲು ಬೆಂಬಲ ನೀಡುತ್ತಿರುವ ಮಹಾರಾಷ್ಟ್ರ ...

ಮುಂದೆ ಓದಿ...
14 Dec 2011

ಮೆಟ್ರೋದಲ್ಲಿ ಕನ್ನಡಿಗರಿಗೆ ಆದ್ಯತೆ ಬಗ್ಗೆ ಕರವೇ ನಡೆಸಿದ ಹೋರಾಟಕ್ಕೆ ಬಿ.ಎಂ.ಆರ್.ಸಿ.ಎಲ್. ಪ್ರತಿಕ್ರಿಯೆ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕು, ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಬಳಸಬೇಕು ಮತ್ತು ಅನಗತ್ಯವಾದ ಹಿಂದಿ ಬಳಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ನಾವು ಡಿಸೆಂಬರ್ ೨, ೨೦೧೧ ರಂದು ಪ್ರತಿಭಟನೆ ನಡೆಸಿದ್ದೆವು. ಕನ್ನಡಿಗರ ಪರವಾಗಿ ನಾವು ಮಾಡಿದ್ದ ಈ ಹಕ್ಕೊತ್ತಾಯ ಪರಿಣಾಮ ಬೀರಿದ್ದು, ಪ್ರತಿಭಟನೆ ವೇಳೆ ನಾವು ...

ಮುಂದೆ ಓದಿ...
24 Nov 2011

ಬೆಳಗಾವಿ: ನಾಡದ್ರೋಹಿ ಮೇಯರ್-ಉಪಮೇಯರ್ ಬಂಧನಕ್ಕೆ ಆಗ್ರಹಿಸಿ, ಮುಖ್ಯಮಂತ್ರಿ ಗೃಹ ಕಚೇರಿ ಮುಂದೆ ತೀವ್ರ ಹೋರಾಟ

ಬೆಳಗಾವಿ ಪಾಲಿಕೆಯ ಮೇಯರ್-ಉಪಮೇಯರ್ ಬಂಧನಕ್ಕೆ ಆಗ್ರಹಿಸಿ ನಿರಂತರ ಹೋರಾಟ ಮಾಡುತ್ತಿರುವ ನಾವು, ಇಂದೂ (೨೪ ನವೆಂಬರ್ ೨೦೧೧ ರಂದು) ಕೂಡ ಹೋರಾಟ ಮುಂದುವರೆಸಿದೆವು. ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಅವರ ಗೃಹ ಕಚೇರಿ “ಕೃಷ್ಣಾ” ಮುಂದೆ ನೂರಾರು ಕಾರ್ಯಕರ್ತರೊಡನೆ ರಾಜ್ಯ ಸರ್ಕಾರದ ಧೋರಣೆಯನ್ನು ಪ್ರತಿಭಟಿಸುವ ಮೂಲಕ ಹೋರಾಟದ ತೀವ್ರತೆಯನ್ನು ಹೆಚ್ಚಿಸಿದೆವು. ಇಂದಿನ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಮುಂದೆ ಓದಿ...
22 Nov 2011

ಬೆಳಗಾವಿ: ನಾಡದ್ರೋಹಿಗಳ ಬಂಧಿಸುವ ಮತ್ತು ಪಾಲಿಕೆ ವಿಸರ್ಜಿಸುವ ಬಗ್ಗೆ ಸರ್ಕಾರದ ಧೋರಣೆ ಖಂಡಿಸಿ ಉಪವಾಸ ಸತ್ಯಾಗ್ರಹ ಮತ್ತು ರಾಜ್ಯವ್ಯಾಪಿ ಪ್ರತಿಭಟನೆ

ಬೆಳಗಾವಿ ಮೇಯರ್-ಉಪಮೇಯರ್ ಸದಸ್ಯತ್ವ ರದ್ದುಗೊಳಿಸದೇ, ನಗರ ಪಾಲಿಕೆಯನ್ನು ವಿಸರ್ಜಿಸದೇ ಇರುವ ಸರ್ಕಾರದ ನಡೆಯನ್ನು ಖಂಡಿಸಿ, ಸರ್ಕಾರ ಕೂಡಲೆ ಈ ಕುರಿತು ಕ್ರಮ ಕೈಗೊಂಡು, ನಾಡದ್ರೋಹಿಗಳಿಗೆ ಕುಮ್ಮಕ್ಕು ನೀಡುವಂತ ಧೋರಣೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ನಾವು ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದೇವೆ. ಪ್ರತಿಭಟನೆಯ ಅಂಗವಾಗಿ, ಬೆಳಗಾವಿಯಲ್ಲಿ ಕಳೆದ ಮೂರು ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಬೆಂಗಳೂರಿನಲ್ಲೂ ರಾಜ್ಯಸರ್ಕಾರದ ಕ್ರಮ ...

ಮುಂದೆ ಓದಿ...
18 Nov 2011

ಬೆಳಗಾವಿ: ನಾಡದ್ರೋಹಿಗಳ ಬಂಧನ ಮತ್ತು ಪಾಲಿಕೆ ವಿಸರ್ಜನೆಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ನಡಿಗೆ

ರಾಜ್ಯೋತ್ಸವದ ದಿನ ಕರಾಳದಿನ ಆಚರಿಸಿ, ಕನ್ನಡಿಗರಿಗೆ ಅವಮಾನಿಸಿದ, ಮತ್ತು ಕರ್ನಾಟಕ ಸರ್ಕಾರಕ್ಕೇ ಸವಾಲು ಹಾಕಿರುವ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮಂದಾ ಬಾಳೇಕುಂದ್ರಿ, ಉಪಮೇಯರ್ ರೇಣುಕಿಲ್ಲೇಕರ ಹಾಗೂ ಎಂ.ಇ.ಎಸ್. ಮುಖಂಡ ಸಂಭಾಜಿ ಪಾಟೀಲ – ಈ ಎಲ್ಲಾ ನಾಡದ್ರೋಹಿಗಳನ್ನು ಕೂಡಲೆ ಬಂಧಿಸಿ, ಬೆಳಗಾವಿ ನಗರಪಾಲಿಕೆ ವಿಸರ್ಜಿಸುವಂತೆ ಆಗ್ರಹಿಸಿ ಇಂದು (ನವೆಂಬರ್ ೮, ೨೦೧೧ ರಂದು) ಬೆಂಗಳೂರಿನ ...

ಮುಂದೆ ಓದಿ...
08 Nov 2011

ಬೆಳಗಾವಿ: ನಾಡದ್ರೋಹಿಗಳ ಬಂಧನ ಮತ್ತು ಪಾಲಿಕೆ ವಿಸರ್ಜನೆಗೆ ಆಗ್ರಹಿಸಿ ನಡೆದ ಪ್ರತಿಭಟನೆ – ಪತ್ರಿಕಾ ವರದಿಗಳು

ಕನ್ನಡಿಗರಿಗೆ ಅವಮಾನಿಸಿ, ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದ್ದ ಬೆಳಗಾವಿಯ ನಗರಪಾಲಿಕೆಯಲ್ಲಿರುವ ಮತ್ತು ಎಂ.ಇ.ಎಸ್. ನಲ್ಲಿರುವ ನಾಡದ್ರೋಹಿಗಳನ್ನು ಬಂಧಿಸಲು ಮತ್ತು ನಗರಪಾಲಿಕೆ ವಿಸರ್ಜಿಸಲು ಆಗ್ರಹಿಸಿ ನಾವು ನೆನ್ನೆ (ನವೆಂಬರ್ ೮, ೨೦೧೧ ರಂದು) ಬೆಂಗಳೂರಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ನಡಿಗೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:  

ಮುಂದೆ ಓದಿ...
07 Nov 2011

ಬೆಳಗಾವಿ: ನಾಡವಿರೋಧಿ ಮೇಯರ್, ಉಪಮೇಯರ್ ಅವರನ್ನು ಬಂಧಿಸಲು ಮತ್ತು ನಗರಪಾಲಿಕೆ ವಿಸರ್ಜಿಸಲು ಒತ್ತಾಯಿಸಿ ನಾಳೆ ಬೃಹತ್ ಜಾಥಾ

ನಾಡವಿರೋಧಿ ಎಂ.ಇ.ಎಸ್. ಪರವಹಿಸಿ, ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರಕ್ಕೆ ಸವಾಲಾಕಿರುವ ಬೆಳಗಾವಿ ಪಾಲಿಕೆಯ ಮೇಯರ್ ಮಂದಾ ಬಾಳೇಕುಂದ್ರಿ, ಉಪಮೇಯರ್ ರೇಣುಕಿಲ್ಲೇಕರ, ಹಾಗೂ ಸಂಭಾಜಿ ಪಾಟೀಲ್ ನಂತಹ ನಾಡದ್ರೋಹಿಗಳನ್ನು ಕೂಡಲೆ ಬಂಧಿಸಿ, ಬೆಳಗಾವಿ ಮಹಾನಗರ ಪಾಲಿಕೆ ವಿಸರ್ಜನೆ ಮಾಡಬೇಕೆಂದು ರಾಜ್ಯಸರ್ಕಾರವನ್ನು ಒತ್ತಾಯಿಸಿ, ನಾಳೆ (ನವೆಂಬರ್ ೮, ೨೦೧೧ ರಂದು) ಬೆಳಿಗ್ಗೆ ೧೧.೩೦ ಕ್ಕೆ ಬೆಂಗಳೂರಿನ ಬನ್ನಪ್ಪ ಪಾರ್ಕನಿಂದ ವಿಧಾನಸೌಧದವರೆಗೆ ಬೃಹತ್ ...

ಮುಂದೆ ಓದಿ...