ಹೋರಾಟಗಳು

06 Feb 2010

ಎಂ. ಇ. ಎಸ್ ಗೆ ಮುಖಭಂಗ : ಕರವೇ ಹೋರಾಟ ಯಶಸ್ವಿ

ಭಾಷೆಯ ನೆಪದಲ್ಲಿ ತನ್ನ ಪುಂಡಾಟಿಕೆಯನ್ನು ಮೆರೆಸುತ್ತಾ ಬಂದಿದ್ದ ಎಂ. ಇ. ಎಸ್ ಗೆ ತೀವ್ರ ಮುಖಭಂಗವಾಗಿದೆ. ತನ್ನ ರಾಜಕೀಯ ಬೇಳೆಕಾಳನ್ನು ಬೇಯಿಸಿಕೊಳ್ಳಲು ಬೆಳಗಾವಿಯಲ್ಲಿ ಆಗಾಗ ಸಮ್ಮೇಳನದ ನೆಪದಲ್ಲಿ ಜನರ ಮಧ್ಯ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದ ಎಂ. ಇ. ಎಸ್ “ಮರಾಠಿ ಸೀಮಾ ಪರಿಷತ್” ನಡೆಸಲು ಹೋಗಿ ತೀವ್ರ ಮುಖಭಂಗ ಅನುಭವಿಸಿದೆ. ನಮ್ಮ ವೇದಿಕೆಯ ದಿಟ್ಟ ಹೋರಾಟದ ...

ಮುಂದೆ ಓದಿ...
04 Feb 2010

ಮರಾಠಿ ಸಮ್ಮೇಳನ ನಿರ್ಬಂಧಕ್ಕೆ ಆಗ್ರಹಿಸಿ ಕರವೇಯಿಂದ ಬೃಹತ್ ಪ್ರತಿಭಟನೆ

ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ “ಮರಾಠಿ ಸೀಮಾ ಪರಿಷತ್” ಸಮ್ಮೇಳನಕ್ಕೆ ಅನುಮತಿ ನೀಡಬಾರದೆಂದು ನಮ್ಮ ವೇದಿಕೆ ೦೪-೦೨-೨೦೧೦ ರಂದು ಬೆಂಗಳೂರಿನ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿ ಸರಕಾರವನ್ನು ಆಗ್ರಹಿಸಿದೆ. ಬೆಳಗಾವಿಯಲ್ಲಿ ಸಾಮರಸ್ಯದಿಂದ ಬದುಕುತ್ತಿರುವ ಜನರ ಮಧ್ಯೆ ಎಂ. ಇ. ಎಸ್ ಭಾಷೆಯ ಹೆಸರಿನಲ್ಲಿ ಸಾಮರಸ್ಯ ಕದಡಲು ಪ್ರಯತ್ನಿಸುತ್ತಿದೆ, ಇದಕ್ಕೆ ಸರಕಾರ ಅವಕಾಶ ...

ಮುಂದೆ ಓದಿ...
02 Feb 2010

ಮರಾಠಿ ಸೀಮಾ ಪರಿಷತ್ ಮೇಳಕ್ಕೆ ಕರವೇ ವಿರೋಧ

ಬೆಳಗಾವಿ ಮಹಾರಾಷ್ಟ್ರದಲ್ಲಿದೆ ಎಂದು ಉಪರಾಷ್ಟ್ರಪತಿಗಳ ಕಾರ್ಯಾಲಯದಿಂದ ರಾಜ್ಯದ ಬೆಳಗಾವಿ ಜಿಲ್ಲೆಯ ಕ್ರೀಡಾಧಿಕಾರಿಗಳ ಕಛೇರಿಗೆ ಬಂದಿರುವ ಪತ್ರಕ್ಕೆ ಉತ್ತರಿಸದೆ ಮೌನವಹಿಸಿರುವ ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ರಾಜ್ಯಾದ್ಯಂತ ನಮ್ಮ ವೇದಿಕೆ ಇಂದು ಪ್ರತಿಭಟನೆ ನಡೆಸಿತು. ಇದರ ಜೊತೆಗೆ ಕನ್ನಡ ನಾಡಿನ ಏಕತೆಗೆ ಮಾರಕವಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯು ನಡೆಸಲು ಉದ್ದೇಶಿಸಿರುವ ಮರಾಠಿ ಸೀಮಾ ಪರಿಷತ್ ಮೇಳಕ್ಕೆ ...

ಮುಂದೆ ಓದಿ...
16 Jan 2010

ಕನ್ನಡದಲ್ಲಿ ನಾಮಫಲಕ: ನಿಯಮ ಮೀರಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ

ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳಿಗೆ ಇರುವ ನಿಯಮ ೨೪ರ ಪ್ರಕಾರ ಎಲ್ಲಾ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಿಯಮ ಉಲ್ಲಂಘಿಸಿ ತಪ್ಪಿತಸ್ಥರೆಂದು ತೀರ್ಮಾನವಾದಾಗ ಅಂತಹವರಿಗೆ 10,000 ರೂಪಾಯಿಗಳವರೆಗೂ ದಂಡ ಹಾಕಬಹುದಾಗಿದೆ. ಆದರೆ ನಮ್ಮ ನಾಡಿನ ರಾಜಕೀಯ ನಾಯಕರ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ನಿಯಮವಿದ್ದರೂ ನಿಯಮ ಪೂರ್ಣ ಪ್ರಮಾಣದಲ್ಲಿ ಜಾರಿಗೆ ...

ಮುಂದೆ ಓದಿ...
07 Jan 2010

ಕಳಸಾ ಬಂಡುರಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿರುವ ನ್ಯಾಯಾಧಿಕರಣವನ್ನು ರದ್ಧುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಕಳಸಾ ಬಂಡುರಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿರುವ ನ್ಯಾಯಾಧಿಕರಣವನ್ನು ರದ್ಧುಗೊಳಿಸುವಂತೆ ಒತ್ತಾಯಿಸಿ ನಮ್ಮ ರಕ್ಷಣಾ ವೇದಿಕೆಯ ಕಾರ್ಯಕರ್ತರು ಟಿ.ಏ. ನಾರಾಯಣ ಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರೈಲು ತಡೆ ನಡೆಸಿ ಪ್ರತಿಭಟಿಸಿದರು. ಪ್ರತಿಭಟನೆಯ ವರದಿಯನ್ನು ಇಲ್ಲಿ ನೋಡಿ

ಮುಂದೆ ಓದಿ...
01 Jan 2010

ಕನ್ನಡದಲ್ಲಿ ನಾಮಫಲಕ – ಕಾನೂನು ಮುರಿದದ್ದನ್ನು ಪ್ರತಿಭಟಿಸಿದ್ದಕ್ಕೇ ಬಂಧನ

ಕರ್ನಾಟಕದ ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳಲ್ಲಿ ಇರಬೇಕಾದ ಕನ್ನಡದ ನಾಮಫಲಕದ ಕುರಿತು, ಕಾನೂನಿನ ನಿಯಮ ೨೪ರ ಅನ್ವಯ ಇರುವ ಸರ್ಕಾರಿ ಆಜ್ಞೆಯನ್ನು ಇಂದಿಗೂ ಉಲ್ಲಂಘಿಸುತ್ತಿರುವವರ ವಿರುದ್ಧ ಮತ್ತು ಕಾನೂನು ಮುರಿಯುವುದನ್ನು ಸುಮ್ಮನೆ ನೋಡಿಕೊಂಡಿರುವ ಸರ್ಕಾರದ ವಿರುದ್ಧ ಕರ್ನಾಟಕದ ರಾಜ್ಯೋತ್ಸವದ ದಿನವಾದ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆವು. ಅದರ ಪತ್ರಿಕಾ ವರದಿಗಳನ್ನು ಲಗತ್ತಿಸಿದೆ. ವಿಷಾದದ ಸಂಗತಿಯೆಂದರೆ ೧೯೮೫ ...

ಮುಂದೆ ಓದಿ...
14 Dec 2009

ಕಳಸಾ ಬಂಡುರಿ ಕುಡಿಯುವ ನೀರಿನ ಯೋಜನೆಯನ್ನು ನ್ಯಾಯಾಧಿಕರಣ ಪ್ರಾಧಿಕಾರಕ್ಕೆ ವಹಿಸಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

ಕಳಸಾ ಬಂಡುರಿ ಕುಡಿಯುವ ನೀರಿನ ಯೋಜನೆಯನ್ನು ನ್ಯಾಯಾಧಿಕರಣ ಪ್ರಾಧಿಕಾರಕ್ಕೆ ವಹಿಸಿರುವುದನ್ನು ಖಂಡಿಸಿ ಮತ್ತು ರಾಜ್ಯಪಾಲರು ಕರ್ನಾಟಕದ ನಾಡ ಗೀತೆಗೆ ಅವಮಾನವೆಸಗಿರುವುದನ್ನು ಖಂಡಿಸಿ ಕ.ರ.ವೇ. ಕಾರ್ಯಕರ್ತರು ಬೆಂಗಳೂರಿನಲ್ಲಿ ದೊಡ್ಡ ಪ್ರತಿಭಟನೆಯನ್ನು ನಡೆಸಿದರು. ಪ್ರತಿಭಟನೆಯ ವರದಿಯನ್ನು ಇಲ್ಲಿ ನೋಡಿ .

ಮುಂದೆ ಓದಿ...
19 Nov 2009

ರೈಲ್ವೇ ಪರೀಕ್ಷೆ ಇನ್ನು ಕನ್ನಡದಲ್ಲೆ- ಕ.ರ.ವೇ. ಹೋರಾಟಕ್ಕೆ ಸಿಕ್ಕ ಜಯ

ರೈಲ್ವೇ ಇಲಾಖೆಯ ಪರೀಕ್ಷೆಯನ್ನು ಇನ್ನು ಕನ್ನಡದಲ್ಲೆ ತೆಗೆದುಕೊಳ್ಳ ಬೊಹುದು ಎಂದು ಭಾರತ ಸರ್ಕಾರ ಹೇಳಿದೆ. ಕರ್ನಾಟಕ ರಕ್ಷಣಾ ವೇದಿಕೆ ೨ ವರುಷಗಳಿಂದ ಸತತವಾಗಿ ನಡೆಸಿಕೊಂಡು ಬಂದ ಹೋರಾಟಕ್ಕೆ ಸಿಕ್ಕಿರುವ ಜಯ ಇದಾಗಿದೆ. ಕನ್ನಡದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬೊಹುದು ಎಂದು ಬಂದಿರುವ ವರದಿಯನ್ನು ಇಲ್ಲಿ ನೋಡಿ.

ಮುಂದೆ ಓದಿ...
28 Sep 2009

ಮೈಸೂರಿನ ರಂಗಾಯಣದಲ್ಲಿ ತಿರುವಳ್ಳುವರ್ ಪ್ರತಿಮೆ – ಕ.ರ.ವೇ. ಇಂದ ವಿರೋಧ

ಮೈಸೂರಿನ ರಂಗಾಯಣದಲ್ಲಿ ತಿರುವಳ್ಳುವರ್ ಪ್ರತಿಮೆ ಪ್ರತ್ಯಕ್ಷವಾಗಿದ್ದರ ಸುದ್ದಿ ತಿಳಿದ ನಮ್ಮ ಕಾರ್ಯಕರ್ತರು, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಇದರ ವರದಿಯನ್ನಿ ಇಲ್ಲಿ ನೋಡಿ.

ಮುಂದೆ ಓದಿ...
09 Sep 2009

ಹಿಂದಿ ಸಪ್ತಾಹ ರದ್ದು ಪಡಿಸಲು ಕ.ರ.ವೇ. ಆಗ್ರಹ

ಕೇಂದ್ರ ಸರಕಾರ, ಕೇಂದ್ರ ಸರಕಾರದ ಕಚೇರಿಗಳಲ್ಲಿ “ಹಿಂದಿ ಸಪ್ತಾಹ” ಕಾರ್ಯಕ್ರಮವನ್ನು ನಡೆಸಿ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವ ಮೂಲಕ, ಕನ್ನಡವನ್ನು ಮುಗಿಸುವ ಹುನ್ನಾರ ನಡೆಸುತ್ತಿದೆ. “ಹಿಂದಿ ಸಪ್ತಾಹ” ಕಾರ್ಯಕ್ರಮವನ್ನು ರದ್ದುಪಡಿಸಿಲು ನಾಡಿನ ಜನತೆ ಹಾಗು ಎಲ್ಲ ರಾಜಕೀಯ ಪಕ್ಷಗಳು ಸಂಘಟಿತ ಹೋರಾಟ ನಡೆಸಬೇಕಾಗಿ ಟಿ.ಎ. ನಾರಾಯಣ ಗೌಡರು ಪತ್ರಿಕಾ ಹೇಳಿಕೆ ನೀಡಿದರು. ಇದರ ವರದಿಯನ್ನು ಇಲ್ಲಿ ...

ಮುಂದೆ ಓದಿ...