Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಬೆಳಗಾವಿಯಲ್ಲಿ ಕನ್ನಡಿಗರ ವಿಜಯೋತ್ಸವ.


ಬೆಳಗಾವಿಯಲ್ಲಿ ಮಹರಾಷ್ಟ್ರ ಏಕೀಕರಣ ಸಮಿತಿ (ಎಮ್.ಈ.ಎಸ್) ಮಹಾನಗರ ಪಾಲಿಕೆಯ ಅಧಿಕಾರದಲ್ಲಿದ್ದ ಕಾಲದಲ್ಲಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹುನ್ನಾರ ನಡೆಸುತ್ತಿತ್ತು ಹಾಗೆಯೇ, ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿತ್ತು. ಇದನ್ನು ಮನಗಂಡ ಕರ್ನಾಟಕ ರಕ್ಷಣಾ ವೇದಿಕೆ ಎಮ್.ಈ.ಎಸ್ ವಿರುದ್ಧ ಸಮರ ಸಾರಿತ್ತು

೨೦೦೫ ರಲ್ಲಿ ಕನ್ನಡ ವಿರೋಧಿ ಧೋರಣೆ ತೋರುತ್ತಿದ್ದ ಬೆಳಗಾವಿಯ ಮಹಾಪೌರರಾಗಿದ್ದ ವಿಜಯ್ ಮೋರೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಪಾಲಿಕೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದರಿಂದ, ಮೊರೆಯ ಮುಖಕ್ಕೆ ಮಸಿ ಬಳೆದು ಎಮ್.ಈ.ಎಸ್ ವಿರುದ್ಧ ಐತಿಹಾಸಿಕ ಹೋರಾಟಕ್ಕೆ ನಾಂದಿ ಹಾಡಿದೆವು.
ನಂತರದ ದಿನದಲ್ಲಿ ಬೆಳಗಾವಿಯ ಕನ್ನಡಿಗರನ್ನು ಜಾಗೃತರನ್ನಾಗಿಸಲು ಮತ್ತು ಕನ್ನಡದ ಬಾವುಟದಡಿ ಒಗ್ಗೂಡಿಸಲು.......
  • ಬೆಳಗಾವಿ ಜಿಲ್ಲೆಯಾದ್ಯಂತ, ಹಳ್ಳಿಯಿಂದ ಹಿಡಿದು ಜಿಲ್ಲೆಯವರೆಗೂ ಸಾವಿರಾರು ಶಾಖೆಗಳನ್ನು ತೆರೆದು; ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದೆವು.
  • ಬೆಳಗಾವಿಯಲ್ಲಿ ಪ್ರಕ್ಯಾತ ಗಾಯಕ ಸಿ. ಅಶ್ವತ್ ರವರಿಂದ ಕನ್ನಡವೇ ಸತ್ಯ ಕಾರ್ಯಕ್ರಮ ನಡೆಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದೆವು.
  • ಸಂಘಟನೆಯ ಮೂಲಕ, ಪಾಲಿಕೆ ಚುಣಾವಣೆಗಳಲ್ಲಿ ಕನ್ನಡದ ಅಭ್ಯರ್ಥಿಗಳನ್ನೇ ಗೆಲ್ಲಿಸುವಂತೆ ಕನ್ನಡಿಗರಲ್ಲಿ ಕರೆ ನೀಡಿದೆವು.
  • ಎರಡು ಭಾರಿ ಸಾವಿರಾರು ಸಂಖ್ಯೆಯಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಬಂದು, ಆಗಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರಲ್ಲಿ, ಬೆಳಗಾವಿಗೆ ಅಭಿವೃದ್ದಿಗೆ ವಿಶೇಷ ಒತ್ತು ನೀಡುವಂತೆ ಮನವಿ ಮಾಡಿಕೊಂಡಿದ್ದೆವು.
  • ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಶಾಧಿವೇಶಣ ಹಾಗು ವಿಧಾನ ಸೌಧ ಶಂಖು ಸ್ಥಾಪನೆಗೆ ಕಾರಣವಾಯಿತು.

ಇವೆಲ್ಲದರ ಪರಿಣಾಮವಾಗಿ ಪಾಲಿಕೆ ಚುಣಾವಣೆಯಲ್ಲಿ ಕನ್ನಡಿಗರು ಮೇಲುಗೈ ಸಾಧಿಸಿದರು. ಮಾರ್ಚ್ ೪ ೨೦೦೮ ರಂದು ನಡೆದ ಮಹಾಪೌರರ ಆಯ್ಕೆಯಲ್ಲಿ ನಮ್ಮ ಬೆಂಬಲಿತ ಕನ್ನಡಿಗರೇ ಮಾಹಾಪೌರರಾದರು. ೧೭ ವರುಷಗಳಲ್ಲಿ ಇದೇ ಮೊದಲನೇ ಭಾರಿಗೆ ಕನ್ನಡದ ಅಭ್ಯರ್ಥಿ ಮಹಾಪೌರರಾದದ್ದು. ಇದು ಕರ್ನಾಟಕ ರಕ್ಷಣಾ ವೇದಿಕೆಯ, ಕನ್ನಡಿಗರ ಮತ್ತು ಕರ್ನಾಟಕದ ಐತಿಹಾಸಿಕ ಗೆಲುವು.

ಕರವೇ ಬೆಳಗಾವಿಯಲ್ಲಿ ನಾಡ ದ್ರೋಹಿಗಳ ಸೊಕ್ಕು ಮುರಿದ್ದಿದ್ದು ಮತ್ತು ಬೆಳಗಾವಿಯಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗಲು ನಡೆಸಿದ ಹೋರಾಟಗಳ ಮಾಹಿತಿಗಾಗಿ ಕೆಳಗಿನ ಕೊಂಡಿಗಳನ್ನು ನೋಡಿ.

ಮೋರೆಯ ಮುಖಕ್ಕೆ ಮಸಿ

ಬೆಳಗಾವಿ ವಿಭಜನೆ ವಿರುದ್ಧ ಬೆಂಗಳೂರು ಮುತ್ತಿಗೆ

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಕನ್ನಡಿಗರಿಗೆ ಅಭಿನಂದನಾ ಕೂಟ

ಬೆಳಗಾವಿಯ ನೂತನ ಮಹಾಪೌರ ಮತ್ತು ಉಪಮಹಾಪೌರರಿಗೆ ಅಭಿನಂದನೆ


 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ