Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಹೋರಾಟಗಳು

ಕಳೆದ ೧೦ ವರ್ಷದಿಂದ ಸಮಸ್ಥ ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಡುತ್ತಿರುವ ಕರವೇ; ಉದ್ಯೋಗ, ಭಾಷೆ, ಗಡಿ, ನದಿ,ಕನ್ನಡ ನಾಡಿನ ವಿರುದ್ಧ ಕೇಂದ್ರದ ತಾರತಮ್ಯ ,ಮನರಂಜನೆ ಮುಂತಾದ ಹಲವಾರು ವಿಷಯದಲ್ಲಿ  ಕನ್ನಡ-ಕರ್ನಾಟಕ-ಕನ್ನಡಿಗರಿಗೆ ಅನ್ಯಾಯವಾದಗ ಆ ಅನ್ಯಾಯದ ವಿರುದ್ಧ ಹೋರಾಟ ನಡೆಸಿ ಯಶ ಕಂಡಿದೆ. ಕರವೇ ನಡೆಸಿದ ಹೋರಾಟಗಳನ್ನು ಕೆಳಗಿನ ಲೇಖನದಲ್ಲಿ ನೋಡಬಹುದು-

 

ಉದ್ಯೋಗ-  ಉದ್ಯೋಗದಿಂದಲೇ ಕನ್ನಡಿಗರ ಏಳಿಗೆ ಸಾದ್ಯವೆಂಬುದು ಎಲ್ಲರಿಗೂ ತಿಳಿದ ವಿಷಯ, ಉದ್ಯೋಗವಿಲ್ಲದ ಕನ್ನಡಿಗರ ಏಳಿಗೆ ಎದೆಂದಿಗೂ ಸಾಧ್ಯವಿಲ್ಲ. ಕನ್ನಡಿಗರಿಗೆ ಕರ್ನಾಟಕದಲ್ಲಿ ಉದ್ಯೋಗ ದೊರೆಯಬೇಕ್ಕಾದ್ದು ಕನ್ನಡಿಗರ ಹಕ್ಕು ಕೂಡ,  ಕನ್ನಡನಾಡಿನಲ್ಲಿ ಉದ್ಯೋಗ ಪಡೆಯುವ ಕನ್ನಡಿಗ ಸಾರ್ವಭೌಮನಂತಿರಬಹುದು. ಇಲ್ಲವಾದಲ್ಲಿ ಕನ್ನಡಿಗರು ಉದ್ಯೋಗವರಸಿ ಬೇರೆ ರಾಜ್ಯಗಳಿಗೆ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗದು. ಕರ್ನಾಟಕದ ಉದ್ಯೋಗಗಳು ಪರರ ಪಾಲಾದರೆ ಅದರಿಂದ ಕರ್ನಾಟಕಕ್ಕೆ ವಲಸೆ ಹೆಚ್ಚಾಗಿ ವಲಸಿಗರ ಮತ ಬ್ಯಾಂಕ್ ನಿರ್ಮಾಣವಾಗಿ, ಪರರ ಓಲೈಕೆಗಾಗಿ ರಾಜಕಾರಣಿಗಲು ಕನ್ನಡ-ಕರ್ನಾಟಕ-ಕನ್ನಡಿಗರನ್ನು ಮರೆಯುವ ಸಂದರ್ಭ ನಿರ್ಮಾಣವಾಗಬಹುದು. ಕರ್ನಾಟಕಕ್ಕೆ ಆಗುವ ಅನಿಯಂತ್ರಿತ ವಲಸೆಯಿಂದ ಕನ್ನಡಿಗನೇ ಕರ್ನಾಟಕದಲ್ಲಿ ಉದ್ಯೋಗಕ್ಕೆ ಪರದಾಡುವುದು ಸಾಮಾನ್ಯವಾಗಬಹುದು. ಉದ್ಯೋಗದಿಂದಾಗುವ ಅನಿಯಂತ್ರಿತ ವಲಸೆಯನ್ನು ತಡೆಯಲು ಮತ್ತು ಕನ್ನಡಿಗರಿಗೆ ನ್ಯಾಯ ಸಂಮ್ಮತವಾಗಿ ದೊರೆಯಬೇಕಾದ ಉದ್ಯೋಗವನ್ನು ಕನ್ನಡಿಗರಿಗೆ ದೊರೆಕಿಸಿಕೊಡಲು ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ತರದ ಹೋರಾಟವನ್ನು ನಡೆಸಿಕೊಂಡುಬಂದಿದೆ. ಇವುಗಳಲ್ಲಿ ಕೆಳಗಿನ ಹೋರಾಟಗಳು ಪ್ರಮುಖವು-

ಉದ್ದಿಮೆ-ಉದ್ದಿಮೆಗಳು ರಾಜ್ಯದ ಮತ್ತು ರಾಜ್ಯದ ಜನರ ಆರ್ಥಿಕ ಮಟ್ಟವನ್ನು ಹೆಚ್ಚಿಸುತ್ತದೆ. ಕರ್ನಾಟಕದಲ್ಲಿ ಉದ್ದಿಮೆ ನಡೆಸಲು ಕನ್ನಡಿಗರಿಗೆ ಬೇಕಾದ ವ್ಯವಸ್ಥೆ ಕಲ್ಪಿಸಿಕೊಡುವುದರಿಂದ ಹಲವಾರು ಕನ್ನಡಿಗರು ಉದ್ಯಮಿಗಳಾಗಿ ಕನ್ನಡ ನಾಡಿನ ಏಳಿಗೆಯಾಗುವುದಕ್ಕೆಉಪಕಾರಿಯಾಗುತ್ತದೆ. ಹಲವಾರು ತರದ ಉದ್ದಿಮೆಗಳಿಗೆ ತವರಾಗಿರುವ ಕರ್ನಾಟಕದಲ್ಲಿ ಕನ್ನಡಿಗನಿಗೆ ಉದ್ದಿಮೆ ನಡೆಸಲು ಯಾವುದೇ ಅಡೆತಡೆ ನಿರ್ಮಾಣವಾಗಬಾರದು, ಈ ನಿಟ್ಟಿನಲ್ಲಿ ಕರವೇ ಕನ್ನಡದ ಉದ್ದಿಮೆದಾರರಿಗೆ ಅನ್ಯಾಯವಾದಾಗ ಅವರ ಪರ ನಿಂತು ತನ್ನ ದನಿ ಎತ್ತಿದೆ.

ಕನ್ನಡ ಉದ್ದಿಮೆದಾರರ ಮೇಲೆ ದಬ್ಬಾಳಿಕೆ - ಬೃಹತ್ ಯಶಸ್ವಿ ಜಾಥ

 

ಭಾಷೆ ೨೦೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ  ಕರ್ತವ್ಯ ಕೂಡ. ಕನ್ನಡ  ಭಾಷೆಗೆ  ವಿಶ್ವದ ಎಲ್ಲಾ ಭಾಗದಲ್ಲೂ ಪ್ರಾಮುಖ್ಯತೆ ದೊರೆಯಬೇಕು.

 ಕನ್ನಡವೆಂಬುದೇ ಕನ್ನಡಿಗರೆಲ್ಲರನ್ನು ಒಗ್ಗೂಡಿಸುವ ಏಕೈಕ ಮಂತ್ರ ಮತ್ತು ಕನ್ನಡಿಗರ ಏಳಿಗೆ ಕನ್ನಡದಿಂದ ಮಾತ್ರ ಸಾದ್ಯವೆಂದು ನಂಬಿರುವ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡವನ್ನು ಅಳಿಸುವ ಎಲ್ಲಾ ಶಕ್ತಿಗಳನ್ನು ಹಿಂದಿಕ್ಕಲು ಯಶಸ್ವಿಯಾಗಿದೆ. ಈ ನಿಟ್ಟಿನ  ಹೋರಾಟದಲ್ಲಿ ಕೆಳಗಿನವು ಪ್ರಮುಖವು

 ಗಡಿ -ಹಲವಾರು ಕಾರಣಗಳಿಂದ ಹರಿದು ಹಂಚಿಹೋಗಿದ್ದ ಕನ್ನಡ ನಾಡು, ಏಕೀಕರಣದಿಂದ ತಕ್ಕ ಮಟ್ಟಿಗೆ ಒಂದಾಗಿದೆ ಮತ್ತು ಹಲವಾರು ಕನ್ನಡ ಪ್ರದೇಶಗಳು ಪರರಾಜ್ಯದ ಪಾಲಾಗಿದೆ. ಒಂದಾಗಿರುವ ಕನ್ನಡ ನಾಡನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕೈಲಿದೆ. ಈಗಿರುವ ಕನ್ನಡ ನಾಡನ್ನು ಒಡೆದು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಮ್ಮ ನೆರೆಯ ರಾಜ್ಯಗಳು ಪ್ರಯತ್ನಿಸುತ್ತಿವೆ.  ನೆರೆ ರಾಜ್ಯದ ಕಣ್ಣಿರುವ ಗಡಿನಾಡಿನ ಪ್ರದೇಶಗಳು ಸಾವಿರಾರು ವರ್ಷದ ಕನ್ನಡ ನಾಡಿನ ಇತಿಹಾಸವನ್ನು ಎತ್ತಿತೋರಿಸುತ್ತಿವೆ ಕರ್ನಾಟಕ ಏಕೀಕರಣದಿಂದ ಒಂದಾದ ಕನ್ನಡ ನಾಡನ್ನು ಒಡೆಯುವ ಹುನ್ನಾರವನ್ನು ವಿಫಲಗೊಳಿಸಲು ಮತ್ತು ಅಲ್ಲಿನ ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ತರದ ಹೋರಾಟಗಳನ್ನು ನಡೆಸಿದೆ ಇದರಲ್ಲಿ ಪ್ರಮುಖ ಹೋರಾಟಗಳು ಕೆಳಗಿವೆ -

ನದಿ- ಕರ್ನಾಟಕದಲ್ಲಿ ಹರಿಯುವ ನದಿಗಳು ಕರ್ನಾಟಕದ ರೈತರಿಗೆ ವ್ಯವಸಾಯ ಮಾಡಲು ನೀರು ಮತ್ತು ಹಲವಾರು ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿವೆ. ಕರ್ನಾಟಕದಲ್ಲಿ ಹರಿಯುವ ನದಿಗಳು ಹಲವಾರು ನದಿಗಳು ಇಲ್ಲಿ ಹುಟ್ಟಿ ಬೇರೆ ರಾಜ್ಯಗಳ ಜನರಿಗೂ ಉಪಯುಕ್ತವಾಗಿದೆ ಅಂತಯೇ ಹಲವಾರು ನದಿಗಳು ಬೇರೆ ರಾಜ್ಯದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಹರಿದು ಕನ್ನಡಿಗರ ಬದುಕನ್ನ ಹಸನಾಗಿಸಿದೆ. ಆದರೆ  ನದಿ ನೀರಿನ ಹಂಚಿಕೆ ವಿಷಯಕ್ಕೆ ಬಂದರೆ ಕರ್ನಾಟಕಕ್ಕೆ ಹಲವಾರು ಬಾರಿ ಅನ್ಯಾಯವಾಗಿದೆ, ಇದೇ ರೀತಿ ಹಲವಾರು ಕರ್ನಾಟಕದಲ್ಲಿನ ನೀರಾವರಿ ಯೋಜನೆಗಳಿಗೆ ನಮ್ಮ ನೆರೆಯ ರಾಜ್ಯಗಳು ಅಡ್ಡಿಪಡಿಸಿವೆ. ಕರ್ನಾಟಕಕ್ಕೆ ನ್ಯಾಯ ಸಂಮ್ಮತವಾಗಿ ಆಗಬೇಕಾದ ನೀರಿನ ಹಂಚಿಕೆಗಾಗಿ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಹಲವಾರು ಬಾರಿ ಕರವೇ ಹೋರಾಟ ನಡೆಸಿದೆ ಇವುಗಳಲ್ಲಿ ಪ್ರಮುಖವಾದವು ಕೆಳಗಿವೆ:

ಹಿಂದಿ ಹೇರಿಕೆ-ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡದಷ್ಟೇ ಸ್ಥಾನಮಾನವನ್ನು ಹಿಂದಿ  ಭಾಷೆ ಹೊಂದಿದ್ದರೂ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಸುಳ್ಳು ಹೇಳುತ್ತಾ,   ಹಿಂದಿ ಹೇರಿಕೆಯ ಮೂಲಕ ಹಿಂದಿಯನ್ನು ಮೇಲ್ದರ್ಜೆಯ ಭಾಷೆ ಮತ್ತು ಇತರ ಭಾಷೆಯನ್ನು ಕೆಳದರ್ಜೆಯ ಭಾಷೆಯನ್ನಾಗ್ಗಿಸುವ ಹುನ್ನಾರ ನಡೆಯುತ್ತಿದೆ. ಈ ಹಿಂದಿ ಹೇರಿಕೆ ಹೀಗೆ ಮುಂದುವರೆದಲ್ಲಿ ಸಾವಿರಾರು ವರ್ಷಗಳಿಂದ  ಕರ್ನಾಟಕದ ಜನರ ಜೀವಾಳವಾದ ಕನ್ನಡ, ಕರ್ನಾಟಕದಲ್ಲೇ ಅನಾಥನಾಗುವುದರಲ್ಲಿ ಸಂದೇಹವಿಲ್ಲ. ಈ ಹುನ್ನಾರದ ವಿರುದ್ಧ ರಣ ಕಹಳೆಯನ್ನು ಊದಿರುವ ಕರವೇ, ಕನ್ನಡಿಗರ ಮೇಲೆನ ಹಿಂದಿ ಹೇರಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದೆ.

ಮನರಂಜನೆ ಮತ್ತು ಚಿತ್ರರಂಗ-

ಕರ್ನಾಟಕದಲ್ಲಿ ಕನ್ನಡದಲ್ಲಿ ಮನರಂಜನೆ ಪಡೆಯುವುದು ಕನ್ನಡಿಗರ ಹಕ್ಕು. ಇದನ್ನರಿಯದ ಹಲವಾರು ಮನರಂಜನಾ ವಾಹಿನಿಗಳು ಕನ್ನಡೇತರ ಭಾಷೆಯಲ್ಲಿ ಮನರಂಜನೆಯನ್ನು ನೀಡುವಲ್ಲಿ ನಿರತರಾಗಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದರ ವಿರುದ್ಧ ಕರವೇ ಹಲವಾರು ಹೋರಾಟಗಳನ್ನು ನಡೆಸಿ ಯಶಸ್ವಿಯಾಗಿದೆ.

ಕನ್ನಡ ಚಿತ್ರರಂಗದಿಂದ ಉತ್ತಮ ಚಿತ್ರಗಳು ಹೊರಬಂದು ಆ ಚಿತ್ರಗಳಿಗೆ ವಿಶ್ವ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕಾರಗಳು ದೊರೆಯಬೇಕೆಂಬ ಬಯಕೆಯನ್ನು ಹೊಂದಿ, ಕನ್ನಡ ಚಿತ್ರರಂಗಕ್ಕೆ ಅನ್ಯಾಯವಾದ ಸಮಯದಲ್ಲಿ ಹೋರಾಟವನ್ನು ನಡೆಸಲಾಗಿದೆ. ಈ ಬಗ್ಗೆ ತಿಳಿಯಲು ಕೆಳಗಿನ ಕೊಂಡಿಯನ್ನು ನೋಡಿ

ಆಡಳಿತದಲ್ಲಿ ಕನ್ನಡ-ಕನ್ನಡ ನಾಡಿನಲ್ಲಿ ಎಲ್ಲಾ ಆಡಳಿತವು ಕನ್ನಡದಲ್ಲೆ ನಡೆಯಬೇಕು ಇದರಿಂದ ಆಡಳಿತದಲ್ಲಿ ಪಾರದರ್ಶಿಕತೆ ಉಂಟಾಗುವುದು. ಇದಕ್ಕಾಗಿ ಕರವೇ ಆಡಳಿತದಲ್ಲಿ ಕನ್ನಡವನ್ನು ಬಳಸದಿರುವ ಸಮಯದಲ್ಲಿ ಹೋರಾಟವನ್ನು ನಡೆಸಿಕೊಂಡು ಬಂದಿದೆ.

ಕೇಂದ್ರದ ತಾರತಮ್ಯ-ಭಾರತದ ಒಕ್ಕೂಟದಲ್ಲಿ ಹಲವಾರು ವ್ಯವಸ್ಥೆಗಳು ಕೇಂದ್ರಸರಕಾರದ ಆಡಳಿತಕ್ಕೆ ಒಳಪಟ್ಟಿದೆ.  ಭಾರತ   ಉದಯವಾದಗಲಿಂದಲೂ ಕರ್ನಾಟಕಕ್ಕೆ ಕೇಂದ್ರದಿಂದ ಎಲ್ಲಾ ತರದಲ್ಲು ಅನ್ಯಾಯದ ಸರಮಾಲೆಯೆ ಸಿಗುತ್ತಿದೆ. ಕೇಂದ್ರದಿಂದ ದೊರಕಬೇಕಾದವುಗಳು ನಮ್ಮ ನಾಡಿನ ನಾಯಕರ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ಪರ ರಾಜ್ಯದ ಪಾಲಾಗುತ್ತಿದೆ. ಕೇಂದ್ರ ಸರಕಾರದ ಮಲತಾಯಿ ದೋರಣೆಯ ವಿರುದ್ಧ ಕರವೇ ಹಲವಾರು ಹೋರಾಟಗಳನ್ನು ನಡೆಸಿದೆ ಅವುಗಳಲ್ಲಿ ಪ್ರಮುಖವು ಕೆಳಗಿವೆ


     ಕರವೇ ನಡೆಸಿದ ಇನ್ನು ಹಲವಾರು ಹೋರಾಟಗಳ ಪತ್ರಿಕಾ ವರದಿಯನ್ನು ಕರವೇ ಬ್ಲಾಗ್ ನಲ್ಲಿ ನೋಡಿ-
                                  blog.jpg
     

 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ