ಕನ್ನಡ ಬಂಧುಗಳೆ,
ಕಳೆದ ೧೦ ವರ್ಷಗಳಿಂದ ಕನ್ನಡ-ಕನ್ನಡಿಗ-ಕರ್ನಾಟಕದ ರಕ್ಷಣೆ ಮತ್ತು ಏಳಿಗೆಗಾಗಿ ಹಲವು ಹೋರಾಟಗಳನ್ನು ಮತ್ತು ಕಾರ್ಯಕ್ರಮಗಳನ್ನು ನಾವು ನಡೆಸುತ್ತಾ ಬಂದಿದ್ದೇವೆ. ಈ ಸಂದರ್ಭಗಳಲ್ಲಿ ನಮ್ಮ ಅಧ್ಯಕ್ಷರು ಆಡಿದ ಮಾತುಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಕಾರವಾರ ಕುರಿತು ನೆರೆರಾಜ್ಯಗಳ ಹುನ್ನಾರದ ವಿರುದ್ಧ ಜಾಗೃತಿ ಜಾಥಾ ಕೊಂಕಣಿ ರಾಜ್ಯ ಏಕೀಕರಣ ಮಂಚ್ ಮತ್ತು ಕಾರವಾರ ಗೋಮಾಂತ ಮಂಚ್ ಎಂಬ ಹೆಸರಿನ ಎರಡು ಸಂಘಟನೆಗಳು ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ, ಕಾರವಾರ ಮತ್ತು ಹಳಿಯಾಳ ತಾಲೂಕುಗಳನ್ನು ಗೋವಾ ರಾಜ್ಯಕ್ಕೆ ಸೇರಿಸಬೇಕೆಂದು ಹುನ್ನಾರವನ್ನು ನಡೆಸಿದಾಗ, ಈ ವಿಷಯದ ಬಗ್ಗೆ ಕನ್ನಡಿಗರಲ್ಲಿ ಆತ್ಮಸ್ಥೈರ್ಯ ತುಂಬಲು, ಮತ್ತು ತಮ್ಮ ಸ್ವಾರ್ಥಕ್ಕಾಗಿ ತಾಯಿನಾಡನ್ನೇ ಒಡೆಯಲು ಮುಂದಾಗುವ ದುಷ್ಟರಿಗೆ ಎಚ್ಚರಿಕೆ ನೀಡಲು ಕಾರವಾರದಲ್ಲಿ ದೊಡ್ಡ ಜಾಗೃತಿ ಜಾಥಾವನ್ನು ನಡೆಸಿದ್ದೆವು. ಇದರ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳನ್ನು ಕೆಳಗಿನ ಕೊಂಡಿಯಲ್ಲಿ ಓದಿ : ಕಾರವಾರ ಕುರಿತು ನೆರೆರಾಜ್ಯಗಳ ಹುನ್ನಾರದ ವಿರುದ್ಧ ಜಾಗೃತಿ ಜಾಥಾ
ನೈರುತ್ಯ ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ನೈರುತ್ಯ ರೈಲ್ವೆ ಯ ಡಿ-ದರ್ಜೆ ಉದ್ಯೋಗದ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾದ ಸಮಯದಲ್ಲಿ ಕರವೇ ಐತಿಹಾಸಿಕ ಹೋರಾಟ ನಡೆಸಿ ಆನ್ಯಾಯವನ್ನು ತಪ್ಪಿಸಿತ್ತು. ಈ ವಿಷಯದ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳನ್ನು ಕೆಳಗಿನ ಕೊಂಡಿಯಲ್ಲಿ ನೋಡಿ: ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ರಾಷ್ಟ್ರೀಯ ಪಕ್ಷಗಳಿಂದ ನಾಡಿಗೆ ಅನ್ಯಾಯ
ಇದುವರೆಗೂ ನಮ್ಮ ನಾಡನ್ನಾಳಿದ ರಾಷ್ಟ್ರೀಯ ಪಕ್ಷಗಳೇ ಇಂದಿನ ನಮ್ಮ ಎಲ್ಲಾ ಸಮಸ್ಯೆಗಳಿಗೂ ಕಾರಣ. ಈ ಪಕ್ಷಗಳಲ್ಲಿ ಯಾವೊಂದು ಪಕ್ಷಕ್ಕೂ ಕನ್ನಡ - ಕನ್ನಡಿಗ ಹಾಗೂ ಕರ್ನಾಟಕಗಳ ಹಿತ ಕಾಪಾಡುವ ಬದ್ಧತೆಯಿಲ್ಲ. ಸದಾಕಾಲ ಹೈಕಮಾಂಡಿನ ಗುಲಾಮಗಿರಿಯನ್ನು ಮಾಡಿಕೊಂಡಿರುವ ಇವುಗಳು ನಾಡಪರವಾಗಿ ಎಂದಿಗೂ ಪ್ರಾಮಾಣಿಕವಾಗಿ ದನಿಯೆತ್ತಿಲ್ಲ.ನಮ್ಮ ನಾಡಿನ ಸಮಸ್ಯೆಗಳಿಗೆ ಸ್ಪಂದಿಸಿ ಕರ್ನಾಟಕದ ಜನತೆಯ ಹಿತ ಕಾಪಾಡುವಲ್ಲಿ ವಿಫಲವಾಗಿವೆ. ಇದರ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳನ್ನು ಕೆಳಗಿನ ಕೊಂಡಿಯಲ್ಲಿ ಓದಿ :
ಅಧ್ಯಕ್ಷರ ಲೇಖನಿಯಿಂದ - ಮಾರ್ಚ್ ೨೦೧೦ ತಿರುವಳ್ಳವರ್ ಪ್ರತಿಮೆ ಮತ್ತು ಮಹಾರಾಷ್ಟ್ರ ಸೀಮ ಪರಿಷತ್ ಸಭೆ ಬಗ್ಗೆ ಕರ್ನಾಟಕ ಸರಕಾರ ಪ್ರತಿಭಟನಾಕಾರರನ್ನು ಜೈಲಿನಲ್ಲಿಟ್ಟು, ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡಿ ಸೌಹಾರ್ದತೆಯ ಭಾಷಣ ಬಿಗಿದಿ. ಆದರೆ ಒಂದು ವಾರದಲ್ಲೇ ತಮಿಳುನಾ ‘ಹೊಗೇನಕಲ್ ಯೋಜನೆ ಬಗ್ಗೆ ಮಾತುಕತೆಯೇನಿಲ್ಲ, ಯೋಜನೆ ಜಾರಿಮಾಡೇ ತೀರುತ್ತೇವೆ’ ಅನ್ನುವ ಹೇಳಿಕೆಯ ತಪರಾಕಿ ಸಿಕ್ಕಿತು. ನಾಡಿನ ಜನರೆಲ್ಲಾ ಅಚ್ಚರಿಯಿಂದ ‘ಸೌಹಾರ್ದತೆಯೆಂದರೆ ಇದೇಯೇನು?!’ ಎಂದು ಕಣ್ಕಣ್ಣು ಬಿಡುವಷ್ಟರಲ್ಲಿ ಇದೀಗ ನಮ್ಮಗಳ ತೀವ್ರ ವಿರೋಧದ ನಡುವೆಯೂ ಬೆಳಗಾವಿಯಲ್ಲಿ ಮಹಾರಾಷ್ಟ್ರಾ ಸೀಮಾ ಪರಿಷತ್ ಸಭೆಗೆ ಅನುಮತಿ ನೀಡಿ ತಮ್ಮ ನಾಡದ್ರೋಹಿ ನಿಲುವನ್ನು ತೋರಿಸಿದೆ. ಇದರ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳನ್ನು ಕೆಳಗಿನ ಕೊಂಡಿಯಲ್ಲಿ ಓದಿ :
ಜನವರಿ ೨೦೧೦ ರಲ್ಲಿ ನಡೆದ ಘಟನೆಗಳ ಬಗ್ಗೆ ಅಧ್ಯಕ್ಷರ ಮಾತುಗಳು ಕರವೇ ೧೦ ವರ್ಷ ಪೂರೈಸಿದ ಬಗ್ಗೆ
ನಾಡು ನುಡಿಗೆ ಧಕ್ಕೆಯಾಗುವಂತಹ ಬೆಳವಣಿಗೆಗಳನ್ನು ಪ್ರತಿಭಟಿಸುವ, ಅವುಗಳ ಸದ್ದಡಗಿಸುವ ಮಹತ್ವದ ಬೇಲಿ ಹಾಕುವ ಕೆಲಸ ಒಂದೆಡೆಯಾದರೆ, ನಾಳೆಗಳನ್ನು ಕಟ್ಟಿಕೊಡುವ ನಾಡನ್ನು ಸಮೃದ್ಧತೆಯತ್ತ ಕೊಂಡೊಯ್ಯುವ ಕೆಲಸ ಮತ್ತೊಂದು. ಕರ್ನಾಟಕ ರಕ್ಷಣಾ ವೇದಿಕೆ ಹತ್ತು ವರ್ಷ ಪೂರೈಸಿರುವುದರ ಬಗ್ಗೆ ಅಧ್ಯಕ್ಷರ ಮಾತುಗಳು.
ಕರವೇ ೧೦ ವರ್ಷ ಪೂರೈಸಿದ ಬಗ್ಗೆ ೨೦೦೬ ರ ರಾಜ್ಯೋತ್ಸವದ ಶುಭ ಹಾರೈಕೆಗಳು
ನಮ್ಮ ನಾಡು ಪ್ರಪಂಚದಲ್ಲೇ ಮುಂದುವರಿದ ನಾಡಾಗಬೆಕು, ನಮ್ಮ ಕನ್ನಡಿಗರು ಪ್ರಪಂಚದ ಅತ್ಯಂತ ಮುಂದುವರಿದ ಜನಾಂಗವಾಗಬೇಕು ಎನ್ನುವುದೇ ನಮ್ಮ ನಿಜವಾದ ಗುರಿಯಾಗಬೇಕಾಗಿದೆ. ಕನ್ನಡ ನಾಡಿನಿಂದ ಬಡತನ, ಅಜ್ಞಾನ, ಅನಕ್ಷರತೆಗಳು ನಿರ್ನಾಮವಾಗಿ ಸಮೃದ್ಧಿ, ಸುಖ ಶಾಂತಿಗಳು ಇಲ್ಲಿ ಮನೆ ಮಾಡಬೇಕಾಗಿದೆ. ಈ ಗುರಿಯನ್ನು ಮುಟ್ಟುವುದಾದರೂ ಹೇಗೆ? ಇದನ್ನು ಸಾಧಿಸಲು ಪ್ರಪಂಚದ ಮೂಲೆ ಮೂಲೆಯಲ್ಲಿ ಚದರಿಹೋಗಿರುವ ಕನ್ನಡಿಗರೂ ಸೇರಿದಂತೆ ನಾಡಿನೆಲ್ಲ ಕನ್ನಡಿಗರೂ ಒಗ್ಗಟ್ಟಾಗಬೇಕಾಗಿದೆ. ಇದರ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳನ್ನು ಕೆಳಗಿನ ಕೊಂಡಿಯಲ್ಲಿ ಓದಿ :
೨೦೦೯ ರ ರಾಜ್ಯೋತ್ಸವ ಶುಭ ಹಾರೈಕೆ ಶಿಕ್ಷಣದಲ್ಲಿ ಹಿಂದಿ ಹೇರಿಕೆಗೆ ಕೇಂದ್ರ ಸರಕಾರದ ಯತ್ನ ಕೇಂದ್ರಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಮುಖ್ಯಸ್ಥರಾದ ಶ್ರೀ. ಕಪಿಲ್ ಸಿಬಾಲ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುತ್ತಿರುವೆ ಎನ್ನುವ ಭ್ರಮೆಯಿಂದ ಏಕಾಏಕಿ ಘೋಷಿಸಿದ ಕ್ರಮ ತೀವ್ರ ಆತಂಕಕಾರಿಯಾಗಿದೆ. ಇಡೀ ಭಾರತದ ಉದ್ದಗಲಕ್ಕೂ ಏಕರೂಪಿ ಪಠ್ಯಕ್ರಮ, ಹತ್ತನೇ ತರಗತಿಗೆ ಪರೀಕ್ಷೆ ಐಚ್ಛಿಕ, ರಾಜ್ಯದ ಎಸ್.ಎಸ್.ಎಲ್.ಸಿ ಬೋರ್ಡಿನ ವಿಸರ್ಜನೆ ಮುಂತಾದ ಕ್ರಮಗಳನ್ನು ಒಳಗೊಂಡ ಯೋಜನೆಯನ್ನು ಘೋಷಿಸಿದ್ದಾರೆ. ಇದು ಯಾವುದೇ ಒಕ್ಕೂಟ ವ್ಯವಸ್ಥೆಯ ಸಾಮಾನ್ಯ ಧರ್ಮಕ್ಕೆ ವಿರುದ್ಧವಾಗಿದೆ. ಈ ಕ್ರಮದಿಂದಾಗಿ ರಾಜ್ಯಸರ್ಕಾರಗಳು ತಮ್ಮ ನಾಡಿನ ಮಕ್ಕಳು ಏನನ್ನು ಕಲಿಯಬೇಕೆಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಕಳೆದುಕೊಳ್ಳುವಂತಾಯಿತು ಇದರ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳನ್ನು ಕೆಳಗಿನ ಕೊಂಡಿಯಲ್ಲಿ ಓದಿ :
ಶಿಕ್ಷಣದಲ್ಲಿ ಹಿಂದಿ ಹೇರಿಕೆಗೆ ಕೇಂದ್ರ ಸರಕಾರದ ಯತ್ನ ವಿಧಾನ ಸಭೆ ಚುನಾವಣೆಯಲ್ಲಿ ಕನ್ನಡ ಪರರಿಗೆ ಮಾತ್ರ ಓಟು ನೀಡಲು ಕರೆ
ಯಾವ ಅಭ್ಯರ್ಥಿ ಕನ್ನಡ ಪರರೋ ಅವರಿಗೇ ನಿಮ್ಮ ಮತಗಳನ್ನು ನೀಡಿ.ರಾಜಕೀಯ ದಾಳವಾಗಿ ನಾಡನ್ನು ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕೊಡಗು ಎಂದೆಲ್ಲಾ ಒಡೆಯುವ ಜನರನ್ನು ತಿರಸ್ಕರಿಸಿ. ತಾವು ಗೆಲ್ಲುವ ಸಲುವಾಗಿ ಪರಭಾಷೆಗಳಲ್ಲಿ ಪ್ರಚಾರ ಮಾಡುತ್ತಾ ಪರಭಾಷಿಕರನ್ನು ಓಲೈಸುವ ಆ ಮೂಲಕ ನಾಡಿನ ಸಾರ್ವಭೌಮತ್ವಕ್ಕೆ ಧಕ್ಕೆ ತರುವವರನ್ನು ಬೆಂಬಲಿಸಬೇಡಿ. ಇದರ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳನ್ನು ಕೆಳಗಿನ ಕೊಂಡಿಯಲ್ಲಿ ಓದಿ :
ಅಧ್ಯಕ್ಷರ ನುಡಿ - ಚುನಾವಣೆ ಲೋಕಸಭೆ ಚುನಾವಣೆಯಲ್ಲಿ ಕನ್ನಡ ಪರರಿಗೆ ಮಾತ್ರ ಓಟು ನೀಡಲು ಕರೆ
ಕನ್ನಡ ಕರ್ನಾಟಕ ಮತ್ತು ಕನ್ನಡಿಗರ ಹಿತ ಮತ್ತು ಏಳಿಗೆಗಳ ಬಗ್ಗೆ ಕಾಳಜಿಯಿಲ್ಲದ, ಸಂಸತ್ತಿನ ಅಧಿವೇಶನಕ್ಕೆ ತಪ್ಪಿಸುವ ಮತ್ತು ನಾಡಪರವಾಗಿ ದನಿ ಎತ್ತದ ರಾಜಕಾರಣಿಗಳ ವಿರುದ್ಧವಾಗಿ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸೋಣ. ಕನ್ನಡಿಗರ ಹಿತ ಕಾಯದ ರಾಜಕಾರಣಕ್ಕೆ ನಾಡಲ್ಲಿ ಉಳಿಗಾಲವಿಲ್ಲವೆಂದು ಸಾರೋಣ.ಇದರ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳನ್ನು ಕೆಳಗಿನ ಕೊಂಡಿಯಲ್ಲಿ ಓದಿ : ಲೋಕಸಭೆ ಚುನಾವಣೆ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ ಕರ್ನಾಟಕ ರಕ್ಷಣಾ ವೇದಿಕೆಯು ಆಯೋಜಿಸಿದ್ದ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ ನಿರೀಕ್ಷೆಗೂ ಮೀರಿ ಯಶಗಳಿಸಿದೆ. ಜೊತೆಗೆ ರಾಜ್ಯಸರ್ಕಾರ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಸಲು ಮುಂದಾದಾಗ ಎಂ.ಇ.ಎಸ್ ಇದಕ್ಕೆ ಪ್ರತಿಯಾಗಿ ಮರಾಠಿ ಮಹಾಮೇಳಾವಾ ಒಂದನ್ನು ನಡೆಸಲು ಮುಂದಾಯಿತು. ಕಡೇ ಕ್ಷಣದವರೆಗೆ ಇದಕ್ಕೆ ಅನುಮತಿ ನಿರಾಕರಿಸಲು ಹಿಂದೆಮುಂದೆ ನೋಡುತ್ತಿದ್ದ ರಾಜ್ಯಸರ್ಕಾರ, ನಮ್ಮ ಒತ್ತಡಕ್ಕೆ ಮಣಿದು ಕಡೆಗೂ ಮರಾಠಾ ಮಹಾಮೇಳಾವಕ್ಕೆ ಅನುಮತಿ ನೀಡದೆ ಹೋದದ್ದು ಒಳ್ಳೆಯ ಬೆಳವಣಿಗೆ.ಇದರ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳನ್ನು ಕೆಳಗಿನ ಕೊಂಡಿಯಲ್ಲಿ ಓದಿ :
ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ ಹೊಗೇನಕಲ್ ಮತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ
ಕನ್ನಡಿಗರು ತಮಿಳುನಾಡಿನ ಕುಡಿವ ನೀರಿನ ಯೋಜನೆಗೆ ಅಡ್ದಗಾಲು ಹಾಕುತ್ತಿದ್ದಾರೆ, ಇವರಿಗೆ ಮಾನವೀಯತೆ ಇಲ್ಲ’ ಎನ್ನುವಂತೆ ಬಿಂಬಿಸಲು ಮತ್ತೆ ಮತ್ತೆ ಪ್ರಯತ್ನ ಮಾಡುತ್ತಿರುವುದನ್ನು ನಾವು ಖಂಡಿಸಲೇಬೇಕಿದೆ. ನಮ್ಮ ವಿರೋಧ ತಮಿಳುನಾಡು ಉದ್ದೇಶಿಸಿರುವ ಕುಡಿವ ನೀರಿನ ಯೋಜನೆ ಬಗ್ಗೆ ಅಲ್ಲ, ಅದು ನಮ್ಮ ನೆಲವನ್ನು ಕಬಳಿಸಿ ಅಕ್ರಮವಾಗಿ ಅಲ್ಲಿ ಕಾಮಗಾರಿ ಮಾಡುವುದರ ವಿರುದ್ಧ.ಇದಲ್ಲದೇ ,ಭಾರತೀಯ ಸ್ಟೇಟ್ ಬ್ಯಾಂಕಿನ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಾಗ ಕನ್ನಡಿಗರನ್ನು ಕಡೆಗಣಿಸುತ್ತಿರುವ ಮತ್ತೊಂದು ಅನ್ಯಾಯದ ಘಟನೆ ನಡೆಯಿತು.ಮಾಧ್ಯಮಗಳಲ್ಲಿ ವರದಿಯಾದಂತೆ ಬ್ಯಾಂಕಿನ ನೌಕರಿಗೆ ಒಟ್ಟಾರೆ ಇದುವರೆಗೆ ಆಯ್ಕೆಯಾದ 350 ಜನರಲ್ಲಿ ಕನ್ನಡಿಗರು ಬರೀ 30 ಜನ ಅನ್ನುವುದಾದರೆ ಅದೆಷ್ಟು ನ್ಯಾಯಯುತವಾಗಿ ಈ ನೇಮಕಾತಿಗಳು ನಡೆಯುತ್ತಿರಬಹುದು ಅನ್ನಿಸುವುದಿಲ್ಲವೇ? ಇದರ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳನ್ನು ಕೆಳಗಿನ ಕೊಂಡಿಯಲ್ಲಿ ಓದಿ : 2008 ರಲ್ಲಿ ಜರುಗಿದ ವಿಷಯಗಳ ಬಗ್ಗೆ ಅಧ್ಯಕ್ಷರ ಮಾತುಗಳು
ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ನಿಭಾಯಿಸಲು ರಾಜ್ಯಗಳಲ್ಲಿಯೇ ವಿಶೇಷ ಪಡೆಗಳನ್ನು ಹೊಂದುವುದರ ಬಗ್ಗೆ-ಮುಂಬೈಯಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿ ಎಲ್ಲರ ಮನಕಲಕಿದೆ. ಅಮಾಯಕರನ್ನು ಕೊಲ್ಲುವ ಇಂತಹ ಕೃತ್ಯಗಳನ್ನು ಖಂಡಿಸುತ್ತಲೇ ಇದರ ಕರಾಳ ನೆರಳು ನಮ್ಮ ನಾಡಿನತ್ತಲೂ ಚಾಚದಂತೆ ಎಚ್ಚರ ವಹಿಸಬೇಕಾಗಿದೆ. ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ರಾಜ್ಯಗಳಲ್ಲಿಯೇ ವಿಶೇಷ ಪಡೆಗಳನ್ನು ಹೊಂದಿರುವುದು ಅತ್ಯಂತ ಸೂಕ್ತವಾಗಿದೆ. ಅಂತಹ ಪಡೆಗಳು ನಮ್ಮ ನಾಡಿನ ಸೂಕ್ಷ್ಮ ಪ್ರದೇಶಗಳ ಒಳಹೊರಗುಗಳ ಸಂಪೂರ್ಣ ಪರಿಚಯ ಪಡೆಯುವುದು ಸುಲಭ ಮತ್ತು ಆ ಕಾರಣದಿಂದಲೇ ಹೆಚ್ಚು ಪರಿಣಾಮಕಾರಿ. ನಮ್ಮ ಪೊಲೀಸರ ಕೈಗಳನ್ನು ಈ ವಿಷಯದಲ್ಲಿ ಬಲಪಡಿಸಲೇ ಬೇಕಾಗಿದೆ. ಇದರ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳನ್ನು ಕೆಳಗಿನ ಕೊಂಡಿಯಲ್ಲಿ ಓದಿ :
೨೦೦೮ ರ ನವೆಂಬರ್ ನಲ್ಲಿ ನಡೆದ ಘಟನೆಗಳು ೨೦೦೮ ರ ರಾಜ್ಯೋತ್ಸವ ಶುಭ ಹಾರೈಕೆಗಳು ಏಳಿಗೆಯ ಹಾದಿಯ ಮೊದಲ ಹೆಜ್ಜೆಯಾಗಿ ನಮ್ಮ ರಾಜ್ಯ ಸರ್ಕಾರ ಮೊದಲಿಗೆ ಕನ್ನಡ ಸರ್ಕಾರವಾಗಬೇಕು. ನಾಡಿನ ಜನರ ಬದುಕನ್ನು ಕಟ್ಟುವಂತಹ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವ ಸ್ಥಾಪನೆಗೆ ಎಡೆಬಿಡದೆ ದುಡಿಯಬೇಕು. ಕನ್ನಡಿಗರಾದ ನಮ್ಮಲ್ಲಿ ಕನ್ನಡತನದ ಜಾಗೃತಿಯಾಗಬೇಕು. ಇದರ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳನ್ನು ಕೆಳಗಿನ ಕೊಂಡಿಯಲ್ಲಿ ಓದಿ : ೨೦೦೮ ರ ರಾಜ್ಯೋತ್ಸವ ಶುಭ ಹಾರೈಕೆಗಳು ಹಿಂದಿ ಹೇರಿಕೆ
ಯಾವ ದೇಶ ಸಮಾನತೆಯ ಆಧಾರದ ಮೇಲೆ ನಿಲ್ಲಬೇಕಿತ್ತೋ ಅದು ಒಂದು ಜನಾಂಗದ ಭಾಷೆಯನ್ನು ಮತ್ತೊಂದು ಜನಾಂಗದ ಮೇಲೆ ಹೇರಲಾಗುತ್ತಿರುವುದು ಮತ್ತು ಭಾರತದೇಶದ ಕೇಂದ್ರಸರ್ಕಾರಿ ಆಡಳಿತ ಯಂತ್ರವೇ ಈ ಕೆಲಸ ನಡೆಸುತ್ತಿರುವುದು ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯ ಎಂಬ ಪದಗಳಿಗೆ ಎಸಗಿದ ಘೋರ ಅಪಚಾರವಾಗಿದೆ. ಹಿಂದಿ ಹೇರಿಕೆ ಇನ್ನೂ ಹೆಚ್ಚಿನ ಅಧ್ಯಕ್ಷರ ಲೇಖನಿಗಳನ್ನು ಇಲ್ಲಿ ನೋಡಿ
|