ಡಿ.ವಿ. ಸದಾನಂದ ಗೌಡ ೧೭-೦೩-೨೦೦೯ ರಾಜ್ಯಾಧ್ಯಕ್ಷರು ಭಾ.ಜ.ಪಾ.
ವಿಷಯ: ಕನ್ನಡಿಗರ ಸ್ವಾಭಿಮಾನದ ನೆಲವಾದ ಬೆಳಗಾವಿಯಲ್ಲಿ ನಿನ್ನೆ ನಾಡದ್ರೋಹಿ ಎಮ್.ಇ.ಎಸ್. ಪರವಾಗಿ ಹೋರಾಟ ನಡೆಸಿ ಕರ್ನಾಟಕಕ್ಕೆ ದ್ರೋಹ ಬಗೆದಿರುವ ತಮ್ಮ ಪಕ್ಷದ ಬೆಳಗಾವಿ ಸಂಸದ ಸುರೇಶ್ ಅಂಗಡಿ ಹಾಗು ತಮ್ಮ ಪಕ್ಷದ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ರನ್ನು ತಮ್ಮ ಪಕ್ಷದಿಂದ ಅಮಾನತು ಗೊಳಿಸುವುದರ ಜೊತೆಗೆ ಬೆಳಗಾವಿ ವಿಚಾರದಲ್ಲಿ ತಮ್ಮ ಪಕ್ಷದ ನಿಲುವನ್ನು ರಾಜ್ಯದ ಜನತೆಗೆ ತಿಳಿಸಬೇಕೆಂದು ಒತ್ತಾಯಿಸಿ ಕ.ರ.ವೇ. ಇಂದು ಪ್ರತಿಭಟನೆ ನಡೆಸಿ ಸಲ್ಲಿಸುತ್ತಿರುವ ಮನವಿ ಪತ್ರ.
ನಮ್ಮ ಒತ್ತಾಯಗಳು
೧. ಎಮ್.ಇ.ಎಸ್. ನವರ ಪರವಾಗಿ ಹಿಂದೆಯೂ ಕೂಡ ಮರಾಠಿ ಸಾಹಿತ್ಯ ಸಮ್ಮೇಳನ, ಏ.ಪಿ.ಎಂ.ಸಿ. ಅಧ್ಯಕ್ಷರ ಚುನಾವಣೆ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಭಾಗವಹಿಸಿ ನಿರಂತರವಾಗಿ ಕರ್ನಾಟಕ ವಿರೋಧಿ ಕೆಲಸ ಮಾಡಿಕೊಂಡು ಬಂದಿರುವ ಸುರೇಶ್ ಅಂಗಡಿ ಯವರಿಗೆ ತಮ್ಮ ಪಕ್ಷದ ವತಿಯಿಂದ ಟಿಕೆಟ್ ನೀಡಕೂಡದು.
೨. ಒಂದು ಕಡೆ ಕನ್ನಡಿಗರ ಸರ್ಕಾರ ಎಂದು ಹೇಳಿಕೊಳ್ಳುವ ತಮ್ಮ ಪಕ್ಷ, ತಮ್ಮದೇ ಪಕ್ಷದವರಾದ ಸುರೇಶ್ ಅಂಗಡಿ ಎಮ್.ಇ.ಎಸ್. ಬೆಂಬಲಿಸುತ್ತಿರುವುದರ ಬಗ್ಗೆ ತಮ್ಮ ನಿಲುವನ್ನು ನಾಡಿನ ಜನತೆಗೆ ತಿಳಿಸಬೇಕು.
೩. ಬೆಳಗಾವಿ ಮಹಾನಗರ ಪಾಲಿಕೆ - ಎಮ್.ಇ.ಎಸ್. ದ್ವಜದ ವಿಚಾರವಾಗಿ ರಾಜ್ಯ ಹೈ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿ ನೂತನ ಕಟ್ಟಡದಲ್ಲಿ ಯಾವುದೇ ಕಾರಣಕ್ಕು ಎಮ್.ಇ.ಎಸ್. ದ್ವಜದ ಹಾರಾಟಕ್ಕೆ ಅವಕಾಶ ನೀಡಬಾರದು.
ವಂದನೆಗಳೊಂದಿಗೆ ಟಿ.ಏ. ನಾರಾಯಣ ಗೌಡ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಪೂರಕ ಲೇಖನ |