Karnataka Rashana Vedike
Kuvempu
ico_adhyaksharalEkhaniyinda3.jpg
kvrblog.jpg
Sangatane.jpg

ಉತ್ತರ ಕರ್ನಾಟಕದ ನೆರೆ ಪೀಡಿತರ ಸಂಕಷ್ಟಗಳಿಗೆ ಕ.ರ.ವೇ. ಇಂದ ಸ್ಪಂದನೆ

ಕಾರ್ಯಕ್ರಮಗಳು
ಅಕಾಲಿಕ ಮಳೆಯ ಹೊಡೆತಕ್ಕೆ ಸಿಕ್ಕ ಉತ್ತರ ಕರ್ನಾಟಕ ತತ್ತರಿಸಿಹೋಗಿದೆ. ವರುಣನ ಅಬ್ಬರಕ್ಕೆ ಸಾವಿರಾರು ಮನೆಗಳು ನೆಲಕ್ಕುರುಳಿ ಲಕ್ಷಾಂತರ ಜನರು ಬೀದಿ ಪಾಲಾಗಿದ್ದಾರೆ. ಬೀದಿ ಪಾಲಾಗಿರುವ ಜನಕ್ಕೆ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಲಕ್ಷಾಂತರ ಎಕರೆ ಪ್ರದೇಶದ ಬೆಳೆ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದೆ. ೫೦೦೦ಕ್ಕೂ ಹೆಚ್ಚು ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಇದಲ್ಲದೆ ಮಳೆಯ ರಭಸಕ್ಕೆ ಸಿಕ್ಕು ಪ್ರಾಣ ಕಳೆದುಕೊಂಡ ಜನರ ಸಂಖ್ಯೆ ಸುಮಾರು ೨೦೦ಕ್ಕೂ ಹೆಚ್ಚು.

ಇಂತಹ ಸಂಕಷ್ಟದ ಸಮಯದಲ್ಲಿ ಉತ್ತರ ಕರ್ನಾಟಕದ ಜನತೆಯ ಸಹಾಯಕ್ಕೆ ನಿಂತ ಕರ್ನಾಟಕ ರಕ್ಷಣಾ ವೇದಿಕೆ ನೊಂದ ಜನತೆಗೆ ನೈತಿಕ ಸ್ಥೈರ್ಯ ತುಂಬುವುದರ ಜೊತೆಗೆ, ಸಂತ್ರಸ್ತರಿಗೆ ಊಟ, ಬಟ್ಟೆ, ಜೀವನ ಅವಶ್ಯಕ ವಸ್ತುಗಳನ್ನು ಒದಗಿಸಿದೆ. ವೇದಿಕೆಯ ಜಿಲ್ಲಾ ಘಟಕಗಳಾದ ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ನಗರ ಜಿಲ್ಲೆ, ಹಾಸನ, ಮಂಡ್ಯ ಜಿಲ್ಲೆಗಳ ಮುಖಂಡರುಗಳು ಹಾಗು ತಾಲ್ಲೂಕು ಅಧ್ಯಕ್ಷರುಗಳು ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೆ ಮಳೆಗೆ ಮೃತಪಟ್ಟ ಪ್ರತಿಯೊಂದು ಕುಟುಂಬಕ್ಕೂ ೫೦೦೦ ರೂ ಮೊತ್ತದ ಸಹಾಯ ಧನ ವಿತರಿಸಲಾಗಿದೆ ಹಾಗೂ ನೆರೆ ಪೀಡಿತ ಪ್ರತಿ ಜಿಲ್ಲೆಗಳಲ್ಲಿ ೨ ಕಡುಬಡವ ಕುಟುಂಬಕ್ಕೆ ಮನೆ ಕಟ್ಟಿಸಿಕೊಡವ ನಿರ್ಧಾರ ಮಾಡಲಾಗಿದೆ. ನೆರೆಯಲ್ಲಿ ತಮ್ಮ ತಂದೆತಾಯಿಯರನ್ನು ಕಳೆದುಕೊಂಡು ಅನಾಥರಾಗಿರುವ ರಾಯಚೂರು, ಗದಗ ಹಾಗೂ ಕಲ್ಬುರ್ಗಿ ಜಿಲ್ಲೆಯ ಐದು ಮಕ್ಕಳನ್ನು ದತ್ತು ಪಡೆದುಕೊಳ್ಳುಲಾಗುವುದು.

ಕರ್ನಾಟಕ ರಕ್ಷಣಾ ವೇದಿಕೆ ನೆರೆ ಪೀಡಿತ ಪ್ರದೇಶಗಳಲ್ಲಿ ನಡೆಸಿರುವ ಕಾರ್ಯಗಳ ಸಂಪೂರ್ಣ ವರದಿಯನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ:

http://karave.blogspot.com/2009/10/karave-5-tabbali-makkala-dattu-swekara.html

http://karave.blogspot.com/2009/10/nere-santrastarige-krv-spandane.html

http://karave.blogspot.com/2009/10/6-jillegalalli-krv-parihaara-chitragalu.html

http://karave.blogspot.com/2009/10/kalburgi-nere-krv-parihaara.html

http://karave.blogspot.com/2009/10/bagalakote-nere-krv-parihaara.html

http://karave.blogspot.com/2009/10/koppala-gadaga-nere-santrastarige.html

http://karave.blogspot.com/2009/10/nere-santrastarige-krv-inda-neravu.html
 

ಕಾರ್ಯಕ್ರಮಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ