Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಹೊಗೇನಕಲ್ ಅಕ್ರಮ ಯೋಜನೆಯನ್ನು ವಿರೋಧಿಸಿ ಚಾಮರಾಜನಗರ ಜಿಲ್ಲೆ ಬಂದ್ - ಯಶಸ್ವಿ

ಕ.ರ.ವೇ ಹೋರಾಟಗಳು

ಕರ್ನಾಟಕಕ್ಕೆ ಸೇರಿದ ಹೊಗೇನಕಲ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಯೋಜನೆ ನಡೆಸುವುದರ ಮೂಲಕ ತಮಿಳುನಾಡು ಸರಕಾರ ಕರ್ನಾಟಕದ ಪ್ರದೇಶವನ್ನು ಒತ್ತುವವಿ ಮಾಡಲು ಸಂಚು ರೂಪಿಸಿದೆ. ಹೊಗೇನಕಲ್ ಪ್ರದೇಶದಲ್ಲಿ ಜಂಟಿ ಸಮೀಕ್ಷೆ ನಡೆಸಿ ಸರಿಯಾದ ಗಡಿಯನ್ನು ಕಂಡುಕೊಳ್ಳಬೇಕೆಂಬುದು ಕನ್ನಡಿಗರ ಆಶಯವಾಗಿದೆ. ಜಂಟಿ ಸಮೀಕ್ಷೆಗೆ ಒಪ್ಪದ ತಮಿಳುನಾಡು ಸರಕಾರ, ಕನ್ನಡಿಗರ ಒತ್ತಡದ ನಡುವೆಯೂ ಅಕ್ರಮ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ. ಈ  ಯೋಜನೆಗೆ ಕೇಂದ್ರ ಸರಕಾರದ ಮೇಲಿರುವ ತನ್ನ ಹಿಡಿತದಿಂದ, ಕೇಂದ್ರದ ಸಹಕಾರವನ್ನು ಸಹಾ ಪಡೆಯಲು ಯಶಸ್ವಿಯಾಗಿದೆ.

ಈ ಅಕ್ರಮ ಯೋಜನೆ ವಿರುದ್ಧ ಕರವೇ ನಡೆಸುತ್ತಿರುವ ಹೋರಾಟಗಳ ವಿವರ:

ಹೊಗೇನಕಲ್ ನಲ್ಲಿ ನಡೆಯುತ್ತಿರುವ ಅಕ್ರಮ ಯೋಜನೆಯ ವಿರುದ್ಧ ಚಾಮರಾಜನಗರ ಜಿಲ್ಲೆ ಬಂದ್

ಹೊಗೇನಕಲ್ ನಲ್ಲಿ  ತಮಿಳುನಾಡು ಕೈಗೊಂಡಿರುವ ಅಕ್ರಮ ಯೋಜನೆ ವಿರುದ್ಧ  ಕರ್ನಾಟಕ ರಕ್ಷಣಾ ವೇದಿಕೆಯು ಹೋರಾಟ ನಡೆಸುತ್ತ ಬಂದಿರುವುದು ನಿಮಗೆಲ್ಲರಿಗೂ ತಿಳಿದಿದೆ.  ಈ ಅಕ್ರಮ ಯೋಜನೆಯ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳ ಉದಾಸೀನ ಧೋರಣೆಯನ್ನು ತೊರುತ್ತಿದ್ದು, ಯೋಜನೆಯನ್ನು ನಿಲ್ಲಿಸುವಂತೆ ಮಾಡಲು ಎರಡು ಸರಕಾರಗಳೂ ವಿಫಲವಾಗಿದೆ. ಈ ಉದಾಸೀನ ಧೋರಣೆಯ ವಿರುದ್ಧ ಕರವೇ ಕರೆ ನೀಡಿದ್ದ ಚಾಮರಾಜನಗರ ಜಿಲ್ಲಾ ಬಂದ್ ಗೆ ಚಾಮರಾಜನಗರ ಜಿಲ್ಲೆಯ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸಹಕರಿಸಿ  ಬಂದ್ ಯಶಸ್ವಿಗೊಳಿಸಿದರು.

ಇದರ ಬಗೆಗಿನ ಪತ್ರಿಕಾ ವರದಿಯನ್ನು ನೋಡಿ-

 http://karave.blogspot.com/2010/06/chamarajanagara-bandh-yashasvi.html

ಹೊಗೇನಕಲ್ ಅಕ್ರಮ ಯೋಜನೆಯ ವಿರುದ್ಧ ಕರವೇಯ ಹೋರಾಟಗಳು-

ಹೊಗೇನಕಲ್ ಅಕ್ರಮ ಯೋಜನೆಯ ವಿರುದ್ಧ ಚಾಮರಾಜನಗರದಲ್ಲಿ ಬಹಿರಂಗ ಸಭೆ 

ಹೊಗೇನಕಲ್ ನಲ್ಲಿ ತಮಿಳುನಾಡು ನಡೆಸುತ್ತಿರುವ ಅಕ್ರಮ ಯೋಜನೆಯ ವಿರುದ್ಧ ಹೊಗೇನಕಲ್ ನ ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಬಹಿರಂಗ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ  ಕೇಂದ್ರ ಸರಕಾರವು ಮುಂದಾಳತ್ವ ವಹಿಸಿಕೊಂಡು ಜಂಟಿ ಸಮೀಕ್ಷೆ ನಡೆಸಬೇಕೆಂದು ಆಗ್ರಹಿಸಲಾಯಿತು. 

ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ-

http://karave.blogspot.com/2010/05/chamarajanagaradalli-sabhe.html

 

 ಹೊಗೇನಕಲ್ ಅಕ್ರಮ ಯೋಜನೆ ವಿರುದ್ಧ ಸಂಸತ್ತಿನಲ್ಲಿ ದನಿಯೆತ್ತಲು ಆಗ್ರಹ

ಕರ್ನಾಟಕಕ್ಕೆ ಸೇರಿದ ಹೊಗೇನಕಲ್ ಅರಣ್ಯ ಪ್ರದೇಶದಲ್ಲಿ ಅಕ್ರಮ ಯೋಜನೆ ನಡೆಸುತ್ತಿದ್ದರೂ, ಸಂಸತ್ತಿನಲ್ಲಿ ದನಿಯೆತ್ತದೆ, ಮೌನವಾಗಿರುವ ರಾಜ್ಯದ ಸಂಸತ್ ಸದಸ್ಯರ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಪತ್ರಿಕಾ ವರದಿ

 

 ಹೊಗೇನಕಲ್ ನಲ್ಲಿ ತಮಿಳುನಾಡಿನ ಅಕ್ರಮ ಯೋಜನೆ - ಖಂಡನಾ ಸಭೆಯ ನಿರ್ಣಯಗಳು

ತಮಿಳುನಾಡು ಸರಕಾರ ಹೊಗೇನಕಲ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಡೆಸಲು ಉದ್ದೇಶಿಸಿರುವ ಯೋಜನೆಯನ್ನು ವಿರೋಧಿಸಿ ಖಂಡನಾ ಸಭೆಯನ್ನು 28-09-2010 ರಂದು ಬೆಂಗಳೂರಿನಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಹಲವಾರು ಕನ್ನಡದ ಗಣ್ಯರು ಹಾಗೂ ರೈತ ಮುಖಂಡರು ತಮಿಳುನಾಡಿನ ಅಕ್ರಮ ಯೋಜನೆಯ ವಿರುದ್ಧ ದನಿಯೆತ್ತಿದರು.


ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳು-
  • ಹೊಗೇನಕಲ್ ಕಾಮಗಾರಿಯನ್ನು ತಮಿಳುನಾಡು ಸ್ಥಗಿತಗೊಳಿಸಬೇಕು.
  • ಕೇಂದ್ರ ಕೂಡಲೇ ಜಂಟಿ ಸಮೀಕ್ಷೆ ಕೈಗೊಳ್ಳಬೇಕು.
  • ಕೇಂದ್ರದ ಮೇಲೆ ಒತ್ತಡ ಹೇರಲು ಸರಕಾರ ಸರ್ವ ಪಕ್ಷಗಳ ನಿಯೋಗವನ್ನು ದಿಲ್ಲಿಗೆ ಕರೆದೊಯ್ಯಬೇಕು.
  • ಯೋಜನೆ ಕುರಿತು ಸಂಸತ್ತಿನಲ್ಲಿ ದನಿ ಎತ್ತುವಲ್ಲಿ ವಿಫಲವಾಗಿರುವ ರಾಜ್ಯದ ಸಂಸತ್ ಸದಸ್ಯರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು.
  • ಕೇಂದ್ರ ಗ್ಯಾರಂಟಿ ನೀಡಿರುವುದರಿಂದ ಹೊಗೇನಕಲ್ ಯೋಜನೆಗೆ ಜಪಾನ್ ಕೊಟ್ಯಾಂತರ ರೂ  ನೆರವು ನೀಡಿದೆ. ಭದ್ರತಾ ಪತ್ರವನ್ನು ಕೇಂದ್ರ ವಾಪಸ್ ಪಡೆದುಕೊಳ್ಳಬೇಕು.
  • ಯೋಜನೆ ಸ್ಥಗಿತಗೊಂಡಿದೆ ಎಂದು ಕೇಂದ್ರ ಘೋಷಿಸುವ ತನಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಲಾಗುವುದು, ತಮಿಳು ಸಿನೆಮಾ ಮತ್ತು ಕೇಬಲ್ ಚಾನೆಲ್ ಗಳನ್ನು  ಬಹಿಷ್ಕರಿಸಲಾಗುವುದು.
ಈ ಸಭೆಯ ಪತ್ರಿಕಾ ವರದಿ
 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ