ನಾಡಿನ ಎಲ್ಲಾ ಪಕ್ಷಗಳು ನಾಡಿನ ಹಿತವನ್ನು ಮರೆತು ತಮ್ಮ ಸ್ವಾರ್ಥಕ್ಕಾಗಿ ಹೊರರಾಜ್ಯದವರನ್ನು ಆಯ್ಕೆ ಮಾಡಿವೆ ಮತ್ತು ಮಾಡುತ್ತಿವೆ. ರಾಜ್ಯ ಸಭೆಗೆ ಹೊರರಾಜ್ಯದವರನ್ನು ಆಯ್ಕೆ ಮಾಡುವುದನ್ನು ನಾವು ಸದಾ ಖಂಡಿಸುತ್ತಲೇ ಬಂದಿದ್ದೇವೆ.
ಈಗ ಮತ್ತೊಮ್ಮೆ ನಾಡಿನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಡಿನ ಹಿತವನ್ನು ಬದಿಗೊತ್ತಿ, ಕರ್ನಾಟಕದಿಂದ ಖಾಲಿಯಿರುವ ರಾಜ್ಯಸಭೆ ಸ್ಥಾನಕ್ಕೆ ಹೇಮಾಮಾಲಿನಿಯವರನ್ನು ಆಯ್ಕೆ ಮಾಡಲು ಹೊರಟಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ, ನಾವು ಫೆಬ್ರವರಿ 20, 2011 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆವು.
ಇದರ ಪತ್ರಿಕಾ ವರದಿಯನ್ನು ಈ ಕೊಂಡಿಯಲ್ಲಿ ನೋಡಿ
ಬಿಜೆಪಿ ವಿರುದ್ಧ ಪ್ರತಿಭಟನೆ- ಪರಭಾಷಿಕರಾದ ವೆಂಕಯ್ಯನಾಯ್ಡುರನ್ನು ಆಯ್ಕೆ ಮಾಡಲು ಹೊರಟಿರುವ ಬಿಜೆಪಿಯ ವಿರುದ್ಧ ಕರವೇ ಕಾರ್ಯಕರ್ತರು ೨-೬-೨೦೧೦ ರಂದು ಪ್ರತಿಭಟನೆ ನಡೆಸಿದರು
ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ
ರಾಜ್ಯಸಭೆಗೆ ಕನ್ನಡಿಗರನ್ನೇ ಆಯ್ಕೆ ಮಾಡಿ
ಕರ್ನಾಟಕದಿಂದ ಆಯ್ಕೆಯಾದ ಕೆಲವು ರಾಜ್ಯಸಭೆ ಸದಸ್ಯರ ಅವಧಿ ಪೂರ್ಣಗೊಳ್ಳಲಿದ್ದು, ಹೊಸ ರಾಜ್ಯಸಭೆ ಸದಸ್ಯರಿಗಾಗಿ ಮುಂದಿನ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಕನ್ನಡಿಗರನ್ನು ಮಾತ್ರ ಆಯ್ಕೆ ಮಾಡಿ, ರಾಜ್ಯಸಭೆಯಲ್ಲಿ ಕನ್ನಡ ಡಿಂಡಿಮ ಮೊಳಗಿಸಬೇಕೆಂದು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ,ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಕರ್ನಾಟಕ ರಕ್ಷಣಾ ವೇದಿಕೆಯು ಒತ್ತಾಯಿಸಿದೆ. ಇದರ ಪತ್ರಿಕಾ ವರದಿಯನ್ನು ಈ ಕೊಂಡಿಯಲ್ಲಿ ನೋಡಿ
|