ಉತ್ತರ ಕರ್ನಾಟಕದ ಹುಬ್ಬಳ್ಳಿ- ಧಾರವಾಡ, ಗದಗ ಹಾಗೂ ಹಲವು ಜಿಲ್ಲೆಗಳಲ್ಲಿ ಹತ್ತರಿಂದ ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ಶೋಚನೀಯ ಸ್ಥಿತಿಯಿದೆ. ಇದಲ್ಲದೇ ಈ ಜಿಲ್ಲೆಗಳಲ್ಲಿನ ಪ್ರಮುಖ ನಗರಗಳು ಬೆಳೆಯುತ್ತಿದ್ದು ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನೀರಿನ ಬೇಡಿಕೆಯನ್ನು ಪೂರೈಸಲು ಕರ್ನಾಟಕ ಸರಕಾರ ಮಹದಾಯಿ ನದಿಯ ನಮ್ಮ ಪಾಲಿನ 45 ಟಿ.ಎಂ.ಸಿ ನೀರಿನಿಂದ ಸುಮಾರು 7.56 ಟಿ.ಎಂ.ಸಿ ಯಷ್ಟು ನೀರನ್ನು ಕಳಸ ಮತ್ತು ಬಂಡೂರ ಯೋಜನೆಯ ಮೂಲಕ ಪೂರೈಸಲು ಯೋಜನೆಯನ್ನು ರೂಪಿಸಿ, ಕಾರ್ಯರೂಪಕ್ಕೆ ತರಲು ಕೆಲಸವನ್ನು ಕೈಗೆತ್ತಿಕೊಂಡಿದೆ. ಆದರೆ ಈ ಯೋಜನೆಗೆ ಗೋವಾ ರಾಜ್ಯ ವಿನಾಕಾರಣ ವಿರೋಧವನ್ನು ವ್ಯಕ್ತಪಡಿಸುತ್ತಿದೆ, ಇದಕ್ಕೆ ಕೇಂದ್ರ ಸರಕಾರದ ಕುಮ್ಮಕ್ಕೂ ಸಹ ಇದೆ. ಇದರ ಜೊತೆ ನಮ್ಮ ನಾಡಿನ ರಾಜಕೀಯ ನಾಯಕರ ಇಚ್ಛಾ ಶಕ್ತಿಯ ಕೊರತೆಯಿಂದಾಗಿ ಯೋಜನೆ ಕಾರ್ಯರೂಪಕ್ಕೆ ಬರಲು ತೊಡಕುಂಟಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯು ಹಲವಾರು ವರ್ಷಗಳಿಂದ ಕಳಸ ಬಂಡೂರ ಯೋಜನೆಯ ಜಾರಿಗೆ ಒತ್ತಾಯಿಸಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. ಕಳಸಾ ಬಂಡೂರ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ
ಕಳಸಾ ಬಂಡೂರ ಯೋಜನೆ ಜಾರಿಗೆ ತರಬೇಕೆಂದು 21-10-2010 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ, ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಒತ್ತಾಯಿಸಿದೆವು. ಪ್ರತಿಭಟನೆಯ ಪತ್ರಿಕಾ ವರದಿ
ಹೆಚ್ಚಿನ ಲೇಖನಗಳುಕನ್ನಡಿಗರ ಜೀವನದಿ ಮಹದಾಯಿಗಾಗಿ ಜನಾಂದೋಲನ ಕನ್ನಡಿಗರ ಜೀವನದಿ ಮಹದಾಯಿಗಾಗಿ ಹುಬ್ಬಳ್ಳಿಯಲ್ಲಿ ಬೃಹತ್ ಜಾಥಾ ಮಹಾದಾಯಿ ಯೋಜನೆಗೆ ನ್ಯಾಯಾಧಿಕರಣ ಬೇಡ ಪತ್ರಿಕಾ ವರದಿಗಳು |