ನೈರುತ್ಯ ರೈಲ್ವೆ ಇಲಾಖೆಯು, 2008 ರಲ್ಲಿ 4701 ಡಿ ದರ್ಜೆ ಉದ್ಯೋಗಗಳಿಗೆ ಪರೀಕ್ಷೆ ನಡೆಸಿಲು ಮುಂದಾಗಿದ್ದ ಸಮಯದಲ್ಲಿ ಕರವೇ ಐತಿಹಾಸಿಕ ಹೋರಾಟ ನಡೆಸಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಿತ್ತು. ಕರವೇ ನಡೆಸಿದ ಹೋರಾಟದ ಫಲವಾಗಿ ಪರೀಕ್ಷೆಯನ್ನು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಬರೆಯಬೇಕೆಂಬ ನಿಯಮವು ಬದಲಾಗಿ, ಪ್ರತಿಯೊಂದು ರಾಜ್ಯದಲ್ಲೂ ಆಯಾ ರಾಜ್ಯದ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದೆಂಬ ನಿಯಮ ಜಾರಿಯಾಯಿತು. ಹಿಂದೆ ಕರೆದಿದ್ದ 4701 ಹುದ್ದೆಗಳನ್ನು ಹೊರೆತುಪಡಿಸಿ, ಹೊಸದಾಗಿ 3700 ಹುದ್ದೆಗಳಿಗೆ ಅರ್ಜಿ ಕರೆದು ಪರೀಕ್ಷೆ ನಡೆಸಲಾಗುತ್ತಿದೆ. ಆದರೆ 4701 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2008 ರಲ್ಲಿ ಹೊರ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆಯಲು ಅರ್ಚಿ ಸಲ್ಲಿಸಿದ್ದರು. ಈಗ ಮತ್ತೊಮ್ಮೆ ಹಿಂದೆ ಅರ್ಚಿ ಸಲ್ಲಿಸಿದ್ದ ಕನ್ನಡೇತರ ಅಭ್ಯರ್ಥಿಗಳಿಗೆ ಮರು ಅರ್ಚಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತಿರುವುದರಿಂದ ಮತ್ತೆ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ . 3700 ಹುದ್ದೆಗಳಿಗೆ ಹೊಸದಾಗಿ ಅರ್ಜಿ ಕರೆದು ಪರೀಕ್ಷೆ ನಡೆಸುತ್ತಿರುವಂತೆಯೇ ಹಿಂದಿನ 4701 ಹುದ್ದೆಗಳಿಗೂ ಹೊಸದಾಗಿಯೇ ಅರ್ಜಿಗಳನ್ನು ಕರೆದು ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ 19 ಫೆಬ್ರವರಿ 2011 ರಂದು ಪ್ರತಿಭಟನೆ ನಡೆಸಿದೆವು.ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ
ಇದೇ ವಿಷಯವಾಗಿ ಕರವೇ ನಡೆಸಿರುವ ಹೋರಾಟಗಳು- ರೈಲ್ವೆ ಹುದ್ದೆಗಳಿಗೆ ಕರ್ನಾಟಕದವರನ್ನೇ ನೇಮಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ
ರೈಲ್ವೆ ಇಲಾಖೆ ಈ ಬಾರಿ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಲು ಮುಂದಾಗಿದ್ದು ಕಳೆದಬಾರಿ 4701 ಸ್ಥಾನಗಳಿಗೆ ಅರ್ಜಿ ಹಾಕಿದ್ದವರೂ ಮತ್ತೊಮ್ಮೆ ಅರ್ಜಿ ಹಾಕಬಹುದು ಎನ್ನುವ ಮೂಲಕ ಹೊರರಾಜ್ಯದವರನ್ನು ಮತ್ತೊಮ್ಮೆ ಕರ್ನಾಟಕದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಹುನ್ನಾರ ನಡೆಸಿದೆ. ಈ ಹಿಂದೆಯೂ ರೈಲ್ವೆ ಇಲಾಖೆಯು 2007 ರಲ್ಲಿ ಡಿ ಗ್ರೂಪ ಹುದ್ದೆಗಳಿಗೆ ಬಿಹಾರಿಗಳನ್ನು ತುಂಬಲು ಮುಂದಾಗಿತ್ತು. ಆಗ ಅದನ್ನು ಪ್ರತಿಭಟಿಸಿ ಹೋರಾಟ ನಡೆಸಿದ್ದೆವು ಮತ್ತು ಕಳೆದ ೩ ವರ್ಷಗಳಿಂದ ಸತತವಾಗಿ ಈ ಬಗ್ಗೆ ಹೋರಾಟ ನಡೆಸುತ್ತಾ ಬಂದಿದ್ದೇವೆ.
ಇದೇ ಸಂಬಂಧವಾಗಿ ಈ ಬಾರಿ ನಡೆಸುವ ಪರೀಕ್ಷೆಗಳಿಗೆ ಕರ್ನಾಟಕದವರನ್ನೇ ನೇಮಕ ಮಾಡಿಕೊಳ್ಳಬೇಕು ಮತ್ತು ಹೊರ ರಾಜ್ಯದವರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ನೆನ್ನೆ ಮತ್ತೊಮ್ಮೆ ಬೆಂಗಳೂರಿನ ನೈರುತ್ಯ ರೈಲ್ವೆ ಕಚೇರಿ ಮುಂಭಾಗ ಹೋರಾಟ ನಡೆಸಿದೆವು.
ಅದೇ ಸಂದರ್ಭದಲ್ಲಿ ಕಳೆದ ವರ್ಷವೇ ಮಮತಾ ಬ್ಯಾನರ್ಜಿಯವರ ನೇತೃತ್ವದಲ್ಲಿ ರೈಲ್ವೆ ಇಲಾಖೆಯು ತೀರ್ಮಾನಿಸಿದಂತೆ ಇಲಾಖೆ ನಡೆಸುವ ಪರೀಕ್ಷೆಯನ್ನು ಕನ್ನಡಿಗರು ಕನ್ನಡದಲ್ಲೇ ಬರೆಯುವ ಅವಕಾಶ ಮತ್ತು ಇಡೀ ದೇಶದಲ್ಲಿ ಒಂದೇ ಸಮಯದಲ್ಲಿ ಪರೀಕ್ಷೆ ನಡೆಸುವ ವ್ಯವಸ್ಥೆಯನ್ನು ಮುಂಬರುವ ಪರೀಕ್ಷೆಯಿಂದಲೇ ಜಾರಿಗೆ ತರಬೇಕೆಂದು ಒತ್ತಾಯಿಸಿದೆವು. ಹೋರಾಟದ ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಯಲ್ಲಿ ನೋಡಿ: http://karave.blogspot.com/2010/12/railway-huddegalige-karnatakadavaranne.html |