ಕರ್ನಾಟಕ ರಕ್ಷಣಾ ವೇದಿಕೆಯ ಹತ್ತು ವರ್ಷಗಳ ಪಯಣದ ಅನುಭವ, ಹೋರಾಟಗಳು, ಯಶಸ್ಸುಗಳು - ಈ ಎಲ್ಲವನ್ನೂ ದಶಮಾನೋತ್ಸವದ ಒಂದು ಸಂಭ್ರಮ ಜಾತ್ರೆಯಲ್ಲಿ ನಿಮ್ಮೊಡನೆ ಹಂಚಿಕೊಳ್ಳುವ ಸಮಯ ಇನ್ನೇನು ಹತ್ತಿರವಾಗಿದೆ. ಜೂನ್ 22 ಮತ್ತು 23 ರಂದು ಬೆಂಗಳೂರಿನಲ್ಲಿ ನಡೆಯುವ ನಮ್ಮ ನಿಮ್ಮೆಲ್ಲರ ಈ ಉತ್ಸವದಲ್ಲಿ ಪಾಲ್ಗೊಂಡು, ಕರ್ನಾಟಕದ ಜಾನಪದ ಸೊಗಡನ್ನು ಸವಿಯುವ ಮೂಲಕ, ಕಾರ್ಯಕ್ರಮದ ಸಾರ್ಥಕತೆಗೆ ಕಾರಣರಾಗಿ ಎಂದು ಕೇಳಿಕೊಳ್ಳುತ್ತಾ, ಈ ಮೂಲಕ ಎಲ್ಲ ಕನ್ನಡಿಗರನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ. ಬನ್ನಿ, ಜೊತೆಗೂಡಿ... ಕಾರ್ಯಕ್ರಮದ ವಿವರವಾದ ಮಾಹಿತಿ ಕೆಳಗಿನ ಚಿತ್ರಗಳಲ್ಲಿದೆ:
 



 
 
|