೬೦ರ ದಶಕದಲ್ಲಿ ಮರಾಠಿಗರ ಹಿತಾಸಕ್ತಿಯನ್ನು ಕಾಯಲು ಮರಾಠಿಗರು ಶಿವಸೇನೆಯನ್ನು ಹುಟ್ಟುಹಾಕಿ, ಕನ್ನಡಿಗರ ಹೋಟೆಲ್ ಗಳನ್ನು ದ್ವಂಸಗೊಳಿಸಿ, ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿದ್ದ ಇದೇ ಶಿವಸೇನೆ ಕರ್ನಾಟಕದಲ್ಲಿ ತನ್ನ ಕಬಂದ ಬಾಹುಗಳನ್ನು ವಿಸ್ತರಿಸಲು ಯತ್ನಿಸುತ್ತಿರುವಂತೆಯೇ ಕರ್ನಾಟಕ ರಕ್ಷಣಾ ವೇದಿಕೆ ಆ ಕಬಂದ ಬಾಹುಗಳನ್ನು ಕಟ್ಟಿಹಾಕಿದ್ದು ರಕ್ಷಣಾ ವೇದಿಕೆಯ ಹೋರಾಟಕ್ಕೆ ಸಾಕ್ಷಿ. ಸೆಪ್ಟೆಂಬರ್ ೧೧ ೨೦೦೫ ರಂದು ಭಾನುವಾರ ಕರ್ನಾಟಕ ಶಿವಸೇನಾ ಕಾರ್ಯಕರ್ತರ ರಾಜ್ಯ ಮಟ್ಟದ ಸಭೆಯನ್ನು ಭವಾನಿ ನಗರದ ಷಹಾಜಿ ಭವನದಲ್ಲಿ ಏರ್ಪಡಿಸಲಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಕನ್ನಡಿಗರು(?) ಕೂಡಾ ಆಗಮಿಸಿದ್ದರು. ಉದ್ಘಾಟನೆಗೂ ಮುನ್ನ ಪತ್ರಿಕಗೋಷ್ಟಿ ನಡೆಸಿದ ಶ್ರೀ ಪ್ರಮೋದ್ ಮುತಾಲಿಕ್ ಅವರು ತಾವು ರಾಜ್ಯದ ಹಿತಾಸಕ್ತಿಗಿಂತ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿ, ಪತ್ರಕರ್ತರೊಬ್ಬರು ೬೦ರ ದಶಕದಲ್ಲಿ ಶಿವಸೇನೆ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಪ್ರಸ್ತಾಪಿಸಿದಾಗ ನಿರುತ್ತರರಾದರು. ಮೊದಲೇ ಆಸೀನರಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರುಗಳು. ಉದ್ಘಾಟನೆಯ ಸಮಯದಲ್ಲಿ ಇಡೀ ಸಭೆಯನ್ನೇ ತಮ್ಮ ವಷಕ್ಕೆ ತೆಗೆದುಕೊಂಡು, ಶಿವಸೇನೆಯ ವಿರುದ್ದ ಘೋಷಣೆಗಳನ್ನು ಕೂಗಿ ಬೆಳಗಾವಿ ಬಗ್ಗೆ ಮತ್ತು ಕಾವೇರಿ, ಭೀಮಾ ನದಿ ನೀರಿನ ಬಗ್ಗೆ ತಮ್ಮ ನಿಲುವನ್ನು ತಿಳಿಸುವಂತೆ ಒತ್ತಾಯಿಸಿದಾಗ, ಶ್ರೀ ಪ್ರಮೋದ್ ಮುತಾಲಿಕ್ ಅವರು ಎಲ್ಲಾ ವಿಷಯಗಳಲ್ಲೂ ಕರ್ನಾಟಕದ ಹಿತಾಸಕ್ತಿ ಕಾಪಾಡುವುದಾಗಿ ತಿಳಿಸಿ, ಮುಂದೆ ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಷದಲ್ಲಿ ಶಿವಸೇನಾ ಮುಖ್ಯಸ್ಠ ಬಾಳಾಠಾಕ್ರೆ ಅವರಿಂದ ಕನ್ನಡಿಗರ ಕ್ಷಮಾಪಣೆ ಕೇಳಿಸುವುದಾಗಿಯೂ ಕೂಡ ವಾಗ್ಡಾನ ಮಾಡಿದ್ದರು. ನಂತರ ಹುಬ್ಬಳ್ಳಿ ಸಮಾವೇಷ ಕೂಡಾ ನಡೆಯದೆ, ಶಿವಸೇನೆ ಕರ್ನಾಟಕದಲ್ಲಿ ವಿಸ್ತರಣೆಗೊಳ್ಳದ್ದು ಗಮನಾರ್ಹ. ೧. ಶಿವಸೇನೆ ವಿರುದ್ದ ಪ್ರತಿಭಟನೆ. ೨. ಶಿವಸೇನೆ ವಿರುದ್ದ ಪತ್ರಿಕಾ ಹೇಳಿಕೆ. |