೨೦೦೬ ರಿಂದ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ತಪ್ಪು ಭಾಷಾ ನೀತಿಯಿಂದಾಗಿ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ನಾವು, ಈ ಬಾರಿಯೂ ಸಹ, ಇಂದು (ಸೆಪ್ಟಂಬರ್ 14) ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಿದೆವು.
ಕೇಂದ್ರ ಸರ್ಕಾರದ ಭಾಷಾನೀತಿ ಬದಲಾಗಬೇಕು ಹಾಗೂ ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿರುವ ಸೆಪ್ಟಂಬರ್ ೧೪ ರಂದು ನಡೆಸುವ "ಹಿಂದಿ ದಿವಸ"ದ ಆಚರಣೆಯನ್ನು ರದ್ದುಮಾಡಬೇಕು, ಹಾಗೂ ರಾಜ್ಯದಲ್ಲಿರುವ ಕೇಂದ್ರದ ವ್ಯಾಪ್ತಿಯ ಎಲ್ಲಾ ಇಲಾಖೆಗಳು, ಇನ್ನಿತರ ಸಂಸ್ಥೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಆಡಳಿತ ಭಾಷೆಯನ್ನಾಗಿ ಬಳಸಬೇಕೆಂದು ಕೇಂದ್ರವನ್ನು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆವು. ಜೊತೆಗೆ, ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲೂ ಪ್ರತಿಭಟನೆ ನಡೆಸಿದ ನಂತರ ರಾಜ್ಯಪಾಲರಾದ ಶ್ರೀ ಹಂಸರಾಜ್ ಭಾರಧ್ವಾಜ್ ಅವರಿಗೆ, ತಪ್ಪು ನೀತಿಗಳಿಂದ ಕೂಡಿರುವ ಕೇಂದ್ರ ಸರ್ಕಾರದ ಭಾಷಾನೀತಿಯನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ನಮ್ಮ ಹಕ್ಕೂತ್ತಾಯ ಪತ್ರವನ್ನು ಸಲ್ಲಿಸಿದೆವು. ಹೋರಾಟದ ಹೆಚ್ಚಿನ ವಿವರ, ಹಕ್ಕೊತ್ತಾಯ ಪತ್ರದ ಪ್ರತಿ ಮತ್ತು ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ: ಹಿಂದಿ ಹೇರಿಕೆಯ ವಿರುದ್ಥ ಮಾಡಿದ ರಾಜ್ಯವ್ಯಾಪಿ ಪ್ರತಿಭಟನೆ
ಭಾಷಾನೀತಿ ಬದಲಾಯಿಸಲು ಒತ್ತಾಯಿಸಿ ರಾಜ್ಯಪಾಲರಿಗೆ ಸಲ್ಲಿಸಿದ ಹಕ್ಕೊತ್ತಾಯ ಪತ್ರ ನಾವು ಮಾಡಿದ ಹೋರಾಟದ ಪತ್ರಿಕಾ ವರದಿಗಳು
|