ಮಕ್ಕಳ ಸಂಖ್ಯೆ ಕಮ್ಮಿ ಎಂಬ ಕುಂಟು ನೆಪವೊಡ್ಡಿ ಸುಮಾರು ೩೦೦೦ ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯಸರ್ಕಾರ ನಿರ್ಧರಿಸಿದ್ದು, ಈ ಮೂಲಕ ೨೦೦೯ರ "ಶಿಕ್ಷಣ ಹಕ್ಕು ಕಾಯ್ದೆ" ಅನ್ವಯ ಪ್ರತಿ ಮಗುವಿಗೂ ಮೂಲಭೂತ ಶಿಕ್ಷಣ ಒದಗಿಸಬೇಕಿದ್ದ ಸರ್ಕಾರವೇ ತನ್ನ ಹೊಣೆಗಾರಿಕೆಯಿಂದ ಜಾರಿಕೊಂಡಂತಾಗಿದೆ. ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಬದಲಿಸಿ, ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ೨೪-೧೦-೨೦೧೧ರ ಸೋಮವಾರದಂದು ರಾಜ್ಯಾದ್ಯಂತ ನಮ್ಮ ಎಲ್ಲಾ ಜಿಲ್ಲಾ ಕೆಂದ್ರಗಳಲ್ಲಿ ಪ್ರತಿಭಟನೆ ನಡೆಸಿದೆವು.
ಇದರ ಅಂಗವಾಗಿ, ಬೆಂಗಳೂರಿನಲ್ಲೂ ಕೂಡ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿ, ರಾಜ್ಯಸರ್ಕಾರಕ್ಕೆ ನಮ್ಮ ಮನವಿ ಪತ್ರವನ್ನು ಸಲ್ಲಿಸಿದೆವು. ಪ್ರತಿಭಟನೆಯ ಪತ್ರಿಕಾ ವರದಿಗಳು ಮತ್ತು ಸರ್ಕಾರಕ್ಕೆ ನಾವು ಸಲ್ಲಿಸಿದ ಮನವಿ ಪತ್ರವನ್ನು ಕೆಳಗೆ ನೋಡಿ: ಪತ್ರಿಕಾ ವರದಿಗಳನ್ನು ನೋಡಲು ಈ ಕೊಂಡಿಯನ್ನು ಕ್ಲಿಕ್ಕಿಸಿ. ಮನವಿ ಪತ್ರ   |