ಇದೇ ವಿಷಯವಾಗಿ ಕರ್ನಾಟಕ ಸರ್ಕಾರಕ್ಕೇ ಸವಾಲು ಹಾಕಿರುವ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮಂದಾ ಬಾಳೇಕುಂದ್ರಿ, ಉಪಮೇಯರ್ ರೇಣುಕಿಲ್ಲೇಕರ ಹಾಗೂ ಎಂ.ಇ.ಎಸ್. ಮುಖಂಡ ಸಂಭಾಜಿ ಪಾಟೀಲ - ಈ ಎಲ್ಲಾ ನಾಡದ್ರೋಹಿಗಳನ್ನು ಬಂಧಿಸಿ, ಬೆಳಗಾವಿ ನಗರಪಾಲಿಕೆ ವಿಸರ್ಜಿಸುವಂತೆ ಆಗ್ರಹಿಸಿ ನಿರಂತರ ಹೋರಾಟ ನಡೆಸುಕೊಂಡು ಬರುತ್ತಿದ್ದೇವೆ. ಹೋರಾಟದ ಅಂಗವಾಗಿ ಒಂದು ವಾರಕ್ಕೂ ಹೆಚ್ಚು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಹೋರಾಟವನ್ನು ತೀವ್ರಗೊಳಿಸಿದ್ದೆವು.
ಈ ವಿಷಯವಾಗಿ ನವೆಂಬರ್ ೩, ೨೦೧೧ ರಿಂದ ಇಲ್ಲಿಯವರೆಗೂ ನಡೆಸಿಕೊಂಡು ಬಂದಿರುವ ನಿರಂತರ ಹೋರಾಟಗಳ ಕುರಿತು ಹೆಚ್ಚಿನ ಮಾಹಿತಿ, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ:
ನವೆಂಬರ್ ೩, ೨೦೧೧ ರಂದು ನಾವು ಆರಂಭಿಸಿದ ರಾಜ್ಯವ್ಯಾಪಿ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:
ನವೆಂಬರ್ ೮, ೨೦೧೧ ರಂದು ಬೆಂಗಳೂರಿನ ಬನ್ನಪ್ಪ ಪಾರ್ಕಿನಿಂದ ವಿಧಾನಸೌಧದವರೆಗೆ ನಾವು ನಡೆಸಿದ ಬೃಹತ್ ಪ್ರತಿಭಟನಾ ನಡಿಗೆಯ ವೇಳೆ ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರ ಮತ್ತು ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:
ಬೆಳಗಾವಿ ಮೇಯರ್-ಉಪಮೇಯರ್ ಸದಸ್ಯತ್ವ ರದ್ದುಗೊಳಿಸದೇ, ನಗರ ಪಾಲಿಕೆಯನ್ನೂ ವಿಸರ್ಜಿಸದೇ ಇರುವ ಸರ್ಕಾರದ ಧೋರಣೆಯನ್ನು ಬದಲಿಸಬೇಕೆಂದು ಆಗ್ರಹಿಸಿ ನವೆಂಬರ್ ೧೯ ರಂದು ಬೆಳಗಾವಿಯಲ್ಲಿ ಆರಂಭಿಸಿದ ಆಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಬೆಂಗಳೂರಿನಲ್ಲಿ ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:
ನಮ್ಮ ಹೋರಾಟವನ್ನು ಮುಂದುವರೆಸುತ್ತಾ ನವೆಂಬರ್ ೨೪, ೨೦೧೧ ರಂದು ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಅವರ ಗೃಹ ಕಚೇರಿ "ಕೃಷ್ಣಾ" ಮುಂದೆ ನೂರಾರು ಕಾರ್ಯಕರ್ತರೊಡನೆ ರಾಜ್ಯ ಸರ್ಕಾರದ ಧೋರಣೆಯನ್ನು ಪ್ರತಿಭಟಿಸುವ ಮೂಲಕ ಹೋರಾಟದ ತೀವ್ರತೆಯನ್ನು ಹೆಚ್ಚಿಸಿದೆವು. ಅದರ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:
ಬೆಳಗಾವಿ ಪ್ರಸಕ್ತ ವಿದ್ಯಮಾನಗಳ ಕುರಿತು ಟಿ.ಎ. ನಾರಾಯಣಗೌಡರು ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದ ವಿವರವನ್ನು ಕೆಳಗೆ ನೋಡಿ: