ನಿರಂತರವಾಗಿ ನಾಡವಿರೋಧಿ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿದ್ದ ಎಂ.ಇ.ಎಸ್. ಮತ್ತು ಅದಕ್ಕೆ ಕುಮ್ಮಕ್ಕು ನೀಡುತ್ತಿದ್ದ ಬೆಳಗಾವಿ ನಗರ ಪಾಲಿಕೆಯ ಮೇಯರ್-ಉಪಮೇಯರ್ ಗಳ ಬಂಧನಕ್ಕೆ ಆಗ್ರಹಿಸಿ, ಮತ್ತು ಬೆಳಗಾವಿ ನಗರಪಾಲಿಕೆ ವಿಸರ್ಜಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಿರಂತರ ಹೋರಾಟ ನಡೆಸಿದ್ದೆವು. ಹೋರಾಟದ ಅಂಗವಾಗಿ ನವೆಂಬರ್ ೩, ೨೦೧೧ ರಂದು ರಾಜ್ಯವ್ಯಾಪಿ ಪ್ರತಿಭಟನೆ ಆರಂಭಿಸಿದ್ದ ನಾವು, ಇಡೀ ತಿಂಗಳು ರಾಜ್ಯಾದ್ಯಂತ ನಿರಂತರ ಪ್ರತಿಭಟನೆಗಳನ್ನು ನಡೆಸಿ, ಒಂದು ವಾರಕ್ಕೂ ಹೆಚ್ಚು ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನೂ ನಡೆಸಿದೆವು. ಈ ಎಲ್ಲ ಹೋರಾಟಗಳು ಮತ್ತು ರಾಜ್ಯ ಸರ್ಕಾರದ ಮೇಲೆ ನಾವು ತಂದ ನಿರಂತರ ಒತ್ತಾಯದ ಫಲವಾಗಿ, ನಮ್ಮ ರಾಜ್ಯಸರ್ಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು ವಿಸರ್ಜಿಸಿದೆ. ಇದು ಕೋಟ್ಯಂತರ ಕನ್ನಡಿಗರ ಒಕ್ಕೊರಲ ದನಿಯಾದ ಕರ್ನಾಟಕ ರಕ್ಷಣಾ ವೇದಿಕೆಯ ನಿರಂತರ ಹೋರಾಟಕ್ಕೆ ಸಂದ ಜಯ. ಇದಕ್ಕಾಗಿ ನಾವು ನಡೆಸಿದ ಎಲ್ಲ ಹೋರಾಟಗಳ ಕುರಿತು ಹೆಚ್ಚಿನ ಮಾಹಿತಿ, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ:
ನವೆಂಬರ್ ೩, ೨೦೧೧ ರಂದು ನಾವು ಆರಂಭಿಸಿದ ರಾಜ್ಯವ್ಯಾಪಿ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ: ನವೆಂಬರ್ ೮, ೨೦೧೧ ರಂದು ಬೆಂಗಳೂರಿನ ಬನ್ನಪ್ಪ ಪಾರ್ಕಿನಿಂದ ವಿಧಾನಸೌಧದವರೆಗೆ ನಾವು ನಡೆಸಿದ ಬೃಹತ್ ಪ್ರತಿಭಟನಾ ನಡಿಗೆಯ ವೇಳೆ ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರ ಮತ್ತು ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ: ಬೆಳಗಾವಿ ಮೇಯರ್-ಉಪಮೇಯರ್ ಸದಸ್ಯತ್ವ ರದ್ದುಗೊಳಿಸದೇ, ನಗರ ಪಾಲಿಕೆಯನ್ನೂ ವಿಸರ್ಜಿಸದೇ ಇರುವ ಸರ್ಕಾರದ ಧೋರಣೆಯನ್ನು ಬದಲಿಸಬೇಕೆಂದು ಆಗ್ರಹಿಸಿ ನವೆಂಬರ್ ೧೯ ರಂದು ಬೆಳಗಾವಿಯಲ್ಲಿ ಆರಂಭಿಸಿದ ಆಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಬೆಂಗಳೂರಿನಲ್ಲಿ ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ: ನಮ್ಮ ಹೋರಾಟವನ್ನು ಮುಂದುವರೆಸುತ್ತಾ ನವೆಂಬರ್ ೨೪, ೨೦೧೧ ರಂದು ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಅವರ ಗೃಹ ಕಚೇರಿ "ಕೃಷ್ಣಾ" ಮುಂದೆ ನೂರಾರು ಕಾರ್ಯಕರ್ತರೊಡನೆ ರಾಜ್ಯ ಸರ್ಕಾರದ ಧೋರಣೆಯನ್ನು ಪ್ರತಿಭಟಿಸುವ ಮೂಲಕ ಹೋರಾಟದ ತೀವ್ರತೆಯನ್ನು ಹೆಚ್ಚಿಸಿದೆವು. ಅದರ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:
ಬೆಳಗಾವಿ ಪ್ರಸಕ್ತ ವಿದ್ಯಮಾನಗಳ ಕುರಿತು ಟಿ.ಎ. ನಾರಾಯಣಗೌಡರು ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದ ವಿವರವನ್ನು ಕೆಳಗೆ ನೋಡಿ: |