Karnataka Rashana Vedike
Kuvempu
ico_adhyaksharalEkhaniyinda3.jpg
kvrblog.jpg
Sangatane.jpg

ಕಾವೇರಿ ತೀರ್ಪಿನ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ

ಕ.ರ.ವೇ ಹೋರಾಟಗಳು
ಒಕ್ಕೂಟ ವ್ಯವಸ್ತೆಯಲ್ಲಿ ಎಲ್ಲಾ ರಾಜ್ಯದ ಪ್ರಜೆಗಳೂ ಸಮಾನರು, ಆದರೆ ಕೇಂದ್ರ ಸರಕಾರವು
ಕನ್ನಡಿಗರ ಬಗ್ಗೆ ಸದಾ ತಾರತಮ್ಯ ಧೋರಣೆ ತೋರುತ್ತಾ ಬಂದಿದೆ.
ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಧಿಕರಣ ತೀರ್ಪು ಹೊರಬಂದ ಕೆಲವೇ ಕ್ಷಣದಿಂದಲೇ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ರಾಜ್ಯಾದ್ಯಕ್ಷರಾದ ಶ್ರೀ ಟಿ. ಎ ನಾರಾಯಣಗೌಡರ ನೇತೃತ್ವದಲ್ಲಿ ರಾಜ್ಯದ ಎಲ್ಲ ಕಡೆಗಳಲ್ಲೂ ಪ್ರತಿಭಟನೆ ನಡೆಸುತ್ತ ಬಂದಿದ್ದಾರೆ.

 ಇದರ ಮುಂದಿನ ಹೆಜ್ಜೆಯಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಮಾರ್ಚ್ ೨ ರಂದು ದೆಹೆಲಿಯ ಜಂತರ್-ಮಂತರ್ ಬಳಿ ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ಮುಂದಾದರು ಕೇಂದ್ರ ಸರಕಾರ ತಾರತಮ್ಯ ನೀತಿಯನ್ನು ಕೊನೆಗಾಣಿಸಿ,  ನ್ಯಾಯವನ್ನು ಎತ್ತಿಹಿಡಿಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯು ಒತ್ತಾಯ ಪಡಿಸಲಿದೆ.
ಈ ಪ್ರತಿಭಟನೆಯ ಮೂಲಕ ಕರ್ನಾಟಕವು ಭಾರತದಲ್ಲಿದೆ ಮತ್ತು ಕನ್ನಡಿಗರೂ ಭಾರತೀಯರೇ ಎಂಬುದನ್ನು ಮರೆತಿರುವ ಕೇಂದ್ರ ಸರಕಾರಕ್ಕೆ ಎಚ್ಚೆತ್ತ ಕನ್ನಡಿಗರ ಸಹನೆ ಮುಗಿದಿದೆಯೆಂಬ ಸಂದೇಶ ಸಾರಲು, ದೇಶದ ರಾಜಧಾನಿಯಲ್ಲಿ ಕನ್ನಡಿಗರ ಕಹಳೆ ಮೊಳಗಿಸಲು ಕರ್ನಾಟಕ ರಕ್ಷಣಾ ವೇದಿಕೆ ಉದ್ದೇಶಿಸಿದೆ.

ಎಲ್ಲ ಕನ್ನಡಿಗರು ನಮ್ಮೊಂದಿಗೆ ಕೈ ಜೋಡಿಸಿ, ಸಹಕರಿಸಿ.

 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ