Karnataka Rashana Vedike
Kuvempu
ico_adhyaksharalEkhaniyinda3.jpg
blog.jpg
Sangatane.jpg

ಕಾವೇರಿ: ಮುಂದಿನ ಹೋರಾಟ ಕುರಿತ ಸಮಾಲೋಚನ ಸಭೆ

ಕ.ರ.ವೇ ಹೋರಾಟಗಳು
ನಿರ್ಣಯಗಳು

೧.    ಕಾವೇರಿ ನ್ಯಾಯ ಮಂಡಳಿಯ ಅಂತಿಮ ತೀರ್ಪನ್ನು ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ಗೆಜೆಟ್‌ನಲ್ಲಿ ಪ್ರಕಟಿಸಬಾರದೆಂದು ಒತ್ತಾಯಿಸುವುದು.

೨.    ಅಂತರರಾಜ್ಯ ನದಿ ನೀರಿನ ಕಾಯ್ದೆಗೆ ತಿದ್ದುಪಡಿ ತಂದು ದಿರಾಷ್ಟ್ರೀಯ ಜಲನೀತಿದಿಯನ್ನು ಕೇಂದ್ರ ಸರ್ಕಾರ ರೂಪಿಸಬೇಕೆಂದು ಒತ್ತಾಯಿಸುವುದು.

೩.    ನಾಡಿನ ಮಠಾಧೀಶರು, ಹಾಗೂ ಸಂತರನ್ನೊಳಗೊಂಡ ಸಂಚಲನ ಸಮಿತಿಯನ್ನು ರಚನೆ ಮಾಡಿಕೊಂಡು ರಾಷ್ಟ್ರಪತಿಯವರನ್ನು ಭೇಟಿಮಾಡಿ ನಾಡಿನ ಹಿತಕಾಯಬೇಕೆಂದು ಒತ್ತಾಯಿಸುವುದು.

೪.    ರಾಜ್ಯದ ಕಾಂಗ್ರೆಸ್ ಪಕ್ಷದ ಮುಖಂಡರು ಯು.ಪಿ.ಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿಯವರ ಮೇಲೆ ಒತ್ತಡ ತಂದು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಮರು ಪರಿಶೀಲಿಸಲು ಒತ್ತಾಯಿಸುವುದು.

೫.    ಕಾವೇರಿ ಜಲಾನಯನ ಪ್ರದೇಶದಲ್ಲಿ ಜನರನ್ನು ಜಾಗೃತಗೊಳಿಸಲು ದಿಕಾವೇರಿ ಯಾತೆದ್ರಿ ಯನ್ನು ಕಾವೇರಿ ಉಗಮ ಸ್ಥಳವಾದ ಭಾಗಮಂಡಲದಿಂದ ಬೆಂಗಳೂರಿನ ವರೆಗೂ ನಡೆಸುವುದು.

೬.    ಕಾವೇರಿ ನ್ಯಾಯ ಮಂಡಳಿಯ ತೀರ್ಪನ್ನು ಕೇಂದ್ರ ರದ್ದು ಮಾಡುವಂತೆ ಒತ್ತಾಯಿಸಲು ಮುಂದಿನ ವಾರದಲ್ಲಿ ದುಂಡು ಮೇಜಿನ ಸಭೆಯನ್ನು ಕರೆಯುವುದು. ( ಸಾಹಿತಿಗಳು, ಸಂಸದರು, ಮಠಾದೀಶರು, ರೈತ ಮುಖಂಡರು, ಕನ್ನಡಪರ ಮುಖಂಡರು ಭಾಗವಹಿಸಲಿದ್ದಾರೆ.)

೭.    ರಾಜ್ಯದ ಎಲ್ಲಾ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಠಿಸುವಂತೆ ಒತ್ತಡ ಹೇರುವುದು.

೮.    ಉಭಯ ರಾಜ್ಯದ ಮತ್ತು ಕೇರಳದ ರೈತ ಮುಖಂಡರ ಸಮಾಲೋಚನೆಗೆ ಸೂಕ್ತ ವೇದಿಕೆ ನಿರ್ಮಿಸುವುದು.

ರಾಜಕೀಯ ಪ್ರಬಲ ಶಕ್ತಿಯೊಂದರ ಧ್ರುವೀಕರಣಕ್ಕೆ ಆದ್ಯತೆಯಿತ್ತು ಪ್ರಯತ್ನಿಸುವುದು.
 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ