ಕನ್ನಡಿಗರ ಸ್ವಾಭಿಮಾನವನ್ನು, ಘನತೆಯನ್ನು ಮಣ್ಣುಮಾಡಲು ಹೊರಟಂತಹ 'ಶಿವಾಜಿ ಚಲನಚಿತ್ರದ ಬಿಡುಗಡೆ' ನಮಗೆ ಒಂದು ಮಹತ್ವದ ಸವಾಲಾಗಿತ್ತು. ಕನ್ನಡ ನಾಡಿನಲ್ಲಿ ಚಲನ ಚಿತ್ರ ವಾಣಿಜ್ಯ ಮಂಡಲಿಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನೂರಾರು ಚಿತ್ರಮಂದಿರಗಳಲ್ಲಿ ಶಿವಾಜಿಯನ್ನು ಬಿಡುಗಡೆ ಮಾಡಬೇಕೆಂದು ಉದ್ದೇಶಿಸಿದ್ದ ಯೋಜನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟಿಸುವ ಮೂಲಕ ತಡೆಯಲು ಯಶಸ್ವಿಯಾಯಿತು. ನಮ್ಮದೇ ಚಿತ್ರರಂಗದ ನಿರ್ಲಿಪ್ತತೆ, ಉದಾಸೀನ, ವಾಣಿಜ್ಯ ಮಂಡಲಿಯ ಮೌನ,ಕನ್ನಡ ಚಲನ ಚಿತ್ರರಂಗದ 'ದಿಗ್ಗಜ'ರಿಂದ ಶಿವಾಜಿಗೆ ಬೆಂಬಲ,ಹಿಂದೆಂದೂ ಕಾಣದ ಪೊಲೀಸ್ ಭದ್ರತೆಗಳ ನಡುವೆಯೂ ಕ.ರ.ವೇಯ ಹೋರಾಟ ಸಾಧಿಸಿದ್ದು ಬಹಳ. ನಮ್ಮ ಗೆಲುವು ಹಾಗೂ ಅಂಕಿ ಅಂಶಗಳಿಗೆ ಕೆಳಗಿನ ಕೊಂಡಿಗಳನ್ನು ನೋಡಿ |