Karnataka Rashana Vedike
Kuvempu
ico_adhyaksharalEkhaniyinda3.jpg
kvrblog.jpg
Sangatane.jpg

ಕನ್ನಡ ಉದ್ದಿಮೆದಾರರ ಮೇಲೆ ದಬ್ಬಾಳಿಕೆ - ಬೃಹತ್ ಯಶಸ್ವಿ ಜಾಥ

ಕ.ರ.ವೇ ಹೋರಾಟಗಳು

ಶನಿವಾರ ೨೮ ಜುಲೈ ೨೦೦೭ ರಂದು ಬೆಳಿಗ್ಗೆ ೧೧:೦೦ ಘಂಟೆಗೆ ಇತ್ತೀಚಿಗೆ ಕನ್ನಡಿಗ ಉದ್ದಿಮೆದಾರರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ಲೈಫ್ ಸ್ತೈಲ್ ವೃತ್ತದಿಂದ ಮಹಾತ್ಮಾ ಗಾಂಧಿ ಪ್ರತಿಮೆಯವರೆಗೂ ಬೃಹತ್ ಜಾಥವನ್ನು ಹಮ್ಮಿಕೊಂಡಿತ್ತು.
ಈ ಜಾಥವೂ ಅತ್ಯಂತ ಯಶಸ್ವಿಗಾಗಿ ನೆರೆವೇರಿತು.ಸರಿಸುಮಾರು ೭೦೦೦-೮೦೦೦ ಸಾವಿರ ಕನ್ನಡ ಸೇನಾನಿಗಳು ಪಾಲ್ಗೊಂಡಿದ್ದರು.ಕನ್ನಡಿಗರ ಈ ಜನಸಾಗರ ರಿಚ್ಮಂಡ್ ರಸ್ತೆಯಿಂದ ಮಹಾತ್ಮ ಗಾಂಧಿ ರಸ್ತೆಯ ಮಾರ್ಗವಾಗಿ ಗಾಂಧಿನಗರದ ಗಾಂಧಿ ಪ್ರತಿಮೆಯೆದುರು ಸೇರಿದರು.
28-07-2007_rally1.JPG

ಈ ಜಾಥದ ಬೇಡಿಕೆಗಳು ಈ ರೀತಿ ಇದ್ದವು:

೧.ರಾಜಧಾನಿ ಬೆಂಗಳೂರಿನ ಮೂಲ ಪರಂಪರೆ, ಸುಂದರ ಪರಿಸರವನ್ನು ನಾಶಗೊಳಿಸುತ್ತಾ,ವಿದ್ವಂಸಕ ಚಟುವಟಿಕೆಗಳಿಗೆ ಪ್ರೊತ್ಸಾಹ ನೀಡುತ್ತಿರುವ ಪರಭಾಷಾ ಉದ್ಯಮಿಗಳ ಮೆಳೆ ರಾಜ್ಯ ಸರ್ಕಾರ ತೀವ್ರ ನಿಗ ಇಡುವುದರ ಮೂಲಕ ಶಿಸ್ತು ಕ್ರಮಕ್ಕೆ ಮುಂದಾಗಬೇಕು.
೨.ಭಾಷಾ ಅಲ್ಪಸಂಖ್ಯಾತರೇ ಹೆಚ್ಚಿರುವ ಸ್ಥಳಗಳಲ್ಲಿ ನೆರೆ ರಾಜ್ಯಗಳಿಂದ ಬಂದು ಪ್ರಾರಂಬಿಸುತ್ತಿರುವ ಪರಭಾಷಾ ಉದ್ಯಮಿಗಳು ಹಾಗು ಅವರ ವ್ಯವಹಾರಗಳ ಬಗ್ಗೆ ರಾಜ್ಯ ಸರ್ಕಾರ ಸೂಕ್ಶ್ಮ ನಿಗಾ ವಹಿಸಬೇಕು.
೩.ರಾಜಧಾನಿ ಬೆಂಗಳೂರಿನಲ್ಲಿ ಪರಭಾಷೆ ಹಾಗು ನೆರೆ ರಾಜ್ಯಗಳ ಜನರು ಉದ್ದಿಮೆಗಳನ್ನು ನಡೆಸಲು ರಾಜ್ಯ ಸರ್ಕಾರಕ್ಕೆ ಪರವಾನಿಗೆ ಕೆಳಿದಾಗ ಹಾಗು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮುನ್ನ ಅವರ ಉದ್ಯಮದಲ್ಲಿ ಸ್ಥಳೀಯ ಕನ್ನಡಿಗರಿಗೇ ಕಡ್ಡಯಾವಾಗಿ ಉದ್ಯೋಗಾವಕಾಶವನ್ನು ಕೊಡುವಂತೆ ಸುಗ್ರೀವಾಗ್ನೆ ಹೊರಡಿಸಬೇಕು.
೪.ವಿಶ್ವಮಟ್ಟದಲ್ಲಿ ಹೆಸರು ಪಡೆದಿರುವ ಕೆಂಪೇಗೌಡರ ಕನಸಿನ ಕೂಸಾದಾ ಬೆಂಗಳೂರಿನಲ್ಲಿರುವ ಕನ್ನಡದ ಉದ್ಯಮಿಗಳ ಉಳಿವಿಗೆ ವಿಶೇಷ ಕಾಯ್ದೆ ರೂಪಿಸಿ ವಲಸೆ ಉದ್ದಿಮೆದಾರ ಮೇಲೆ ನಿಯಂತ್ರಣ ಕೈಗೊಂಡು ಕನ್ನಡದ ವಾತಾವರಣವನ್ನು ಉಳಿಸಿ ಬೆಳೆಸಬೇಕು.

ಛಾಯಾಚಿತ್ರಗಳಿಗಾಗಿ ನಮ್ಮ ಬ್ಲಾಗನ್ನು ನೋಡಿ:

http://karave.blogspot.com

 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ