ಅಕ್ಟೋಬರ್ ೪, ೨೦೦೭ ನೇ ಗುರುವಾರ; ಬೆಳಗಾವಿ ನಗರ ಪಾಲಿಕೆಗೆ ಆಯ್ಕೆಯಾದ ಕನ್ನಡಿಗರಿಗೆ ಬೆಂಗಳೂರಿನಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.
ರಾಜ್ಯಾದಂತ ನಡೆದ ನಗರ ಪಾಲಿಕೆ ಚುಣಾವಣೆಯಲ್ಲಿ, ಬೆಳಗಾವಿ ನಗರ ಪಾಲಿಕೆ ಚುಣಾವಣೆ ಬಹಳ ಕುತುಹಲ ಕೆರಳಿಸಿತ್ತು. ೫೮ ಸ್ತಾನಗಳಿಗೆ ನಡೆದ ಚುಣಾವಣೆಯಲ್ಲಿ, ಕನ್ನಡಿಗರು ಉತ್ತಮ ಪ್ರದರ್ಶನ ನೀಡಿ ೨೭ ರಲ್ಲಿ ಗೆದ್ದರೇ, ೧೮ ಎಮ್.ಇ.ಎಸ್ ಗೆದ್ದುಕೊಂಡಿತು. ಕನ್ನಡಿಗರು ಉತ್ತಮ ಸಾಧನೆ ತೋರಲು, ಅವರುಗಳು ಒಂದುಗೂಡಿದ್ದೆ ಕಾರಣ.
೨೦೦೫ ರಲ್ಲಿ ಎಮ್.ಇ.ಎಸ್ ನವರಾದ ವಿಜಯ್ ಮೋರೆ ಮತ್ತು ಶಿವಾಜಿ ಸುಂಟೇಕರ್ ಬೆಳಗಾವಿಯನ್ನು ಮಾಹಾರಾಷ್ಟ್ರಕ್ಕೆ ಸೇರಿಸಬೇಕೆನ್ನುವ ಠರಾವ್ ಹೊರಡಿಸಿದ್ದರು. ಬೆಳಗಾವಿಯನ್ನು ಉಳಿಸಿಕೊಳ್ಳಲು, ಕನ್ನಡಿಗರೆಲ್ಲ ಒಗ್ಗಟ್ಟಾಗಿ ಹೋರಾಡಬೇಕು ಎಂದು ಮೊದಲು ದೂರಾಲೋಚಿಸಿದ್ದು - ಕರ್ನಾಟಕ ರಕ್ಷಣಾ ವೇದಿಕೆ. ಠರಾವ್ ಹೊರಡಿಸಿ, ಕರ್ನಾಟಕ ಸರ್ಕಾರದಿಂದ ಅನುದಾನ ಕೋರಿ ಬೆಂಗಳೂರಿಗೆ ಬಂದಿದ್ದ, ವಿಜಯ್ ಮೋರೆ ಮತ್ತು ಶಿವಾಜಿ ಸುಂಟೇಕರ್ ಇಬ್ಬರಿಗು ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಸಿ ಬಳೆದು, ಐತಿಹಾಸಿಕೆ ಹೋರಾಟಕ್ಕೆ ನಾಂದಿ ಹಾಡಿದರು.
ನಂತರದ ದಿನಗಳಲ್ಲಿ, ಕ.ರ.ವೇ ಬೆಳಗಾವಿ ಜಿಲ್ಲಾದ್ಯಂತ ಸಾವಿರಾರು ಶಾಖೆಗಳನ್ನು ತೆರೆಯಿತು. ಈ ಶಾಖೆಗಳ ಮೂಲಕ, ಹಳ್ಳಿಯಿಂದ ಹಿಡಿದು ಜಿಲ್ಲೆಯ ತನಕ, ಕನ್ನಡಿಗರನ್ನು ಸಂಘಟಿಸುತ್ತ ಬಂದಿತು. ಸಿ. ಅಶ್ವತ್ ರವರಿಂದ, ಕನ್ನಡವೇ ಸತ್ಯ ಕಾರ್ಯಕ್ರಮವನ್ನು ನಡೆಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿ; ಬೆಳಗಾವಿ ನಗರದಲ್ಲಿ, ಕನ್ನಡದ ಜನತೆಯು ಕನ್ನಡದ ಅಭ್ಯರ್ತಿಗಳ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿತು.
ಬೆಳಗಾವಿ ಅಭಿವೃದ್ಧಿಗೆ ವಿಷೇಶ ಒತ್ತು ನೀಡುವಂತೆ, ಬೆಳಗಾವಿ ಇಂದ ಕಾಲ್ನಡಿಗೆಯಲ್ಲಿ ಎರಡು ಭಾರಿ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿತು. ಮುಂದೆ, ಬೆಳಗಾವಿಯಲ್ಲಿ ನಡೆದ ವಿಷೇಶ ಅಧಿವೇಶನ ಮತ್ತು ಸುವರ್ಣ ಸೌಧ ನಿರ್ಮಾಣ ಕಾರ್ಯಗಳಲ್ಲಿ, ಸರ್ಕಾರಕ್ಕೆ ನೈತಿಕೆ ಬೆಂಬಲ ನೀಡಿತು.
 ಶ್ರೀ ನಾರಾಯಣಗೌಡರು ವಿಷೇಶ ಕಾಳಜಿ ವಹಿಸಿ, ಎಮ್.ಇ.ಎಸ್ ನನ್ನು ರಾಜಕೀಯವಾಗಿ ಮಟ್ಟ ಹಾಕುವಂತೆ ಕನ್ನಡದ ಯುವಕರ ಬೆನ್ನು ತಟ್ಟಿ, ಎಲ್ಲ ರೀತಿಯ ನೆರವು ನೀಡಿದರು.
 ಇವೆಲ್ಲದರ ಪರಿಣಾಮವೇ, ಇಂದು ಕನ್ನಡಿಗರು ೨೭ ಸ್ತಾನಗಳನ್ನು ತಮ್ಮದಾಗಿಸಿಕೊಳ್ಳಲು ಕಾರಣ. ಅವರಿಗಾಗಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ. ನಾರಾಯಣ ಗೌಡರು, ಗೆದ್ದ ಕನ್ನಡಿಗರಿಗೆ ಅಭಿನಂದಿಸುತ್ತ, ಮಹಾಪೌರರ ಸ್ತಾನವನ್ನು ಕನ್ನಡಿಗರೇ ಅಲಂಕರಿಸ ಬೇಕೆಂದು ಸಲಹೆಯನ್ನಿತ್ತರು. ಹಾಗೆಯೆ, ಕನ್ನಡದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದೆಂದು ಹಿತವನ್ನಾಡಿದರು. |