ಕರ್ನಾಟಕದ ಪ್ರಮುಖ ಜಿಲ್ಲೆಯಾದ ಇತಿಹಾಸ ಪ್ರಸಿದ್ಧ ವಿಜಾಪುರ ಜಿಲ್ಲೆಯ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಹುದ್ದೆಗೆ ಆಂಧ್ರ ಪ್ರದೇಶದ ಶಾಸಕಿ ಡಾ||ರಾಜ್ಯಲಕ್ಷ್ಮಿ ಅವರನ್ನು ಸದಸ್ಯರನ್ನಾಗಿ ನೇಮಿಸಿರುವ ಕ್ರಮವನ್ನು ಖಂಡಿಸಿ ನಾವು ಉಗ್ರ ರೀತಿಯಲ್ಲಿ ಪ್ರತಿಟಿಸಿದೆವು.  ರಾಜ್ಯಪಾಲರು ಕನ್ನಡ ಬಾರದವರನ್ನು ಉನ್ನತ ಸ್ಥಾನಗಳಿಗೆ ನೇಮಿಸಿ ಒಕ್ಕೂತದ ವ್ಯವಸ್ತೆಗೆ ಧಕ್ಕೆ ತರುತ್ತಿದ್ದಾರೆಂದು ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರು ಅಸಮಾಧಾನ ವ್ಯಕ್ತಪಡಿಸಿದರು. ಈ ನೇಮಕಾತಿಯನ್ನು ಕೂಡಲೇ ರದ್ದುಗೊಳಿಸಿ ನಾಡಿನ ಹಿರಿಯ ಶಿಕ್ಷಣಕಾರನ್ನು ನೇಮಿಸಬೇಕಾಗಿ ಅಧ್ಯಕ್ಷರು ಒತಾಯಿಸಿದರು. ಹೋರಾಟವು ರಾಜ್ಯದ ೯ ಜಿಲ್ಲೆಗಳಲ್ಲಿ ಉಗ್ರ ರೀತಿಯಲ್ಲಿ ನಡೆಯಿತು. ಹೋರಾಟವು ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತಿದುದ್ದನ್ನು ಮನಗಂಡ ರಾಜ್ಯಪಾಲರು ಈ ನೇಮಕಾತಿಯನ್ನು ರದ್ದುಗೊಳಿಸಿದರು. ನೇಮಕಾತಿ ರದ್ದಾದ ಬಳಿಕ ಮಾತನಾಡಿದ ರಾಜ್ಯಾಧ್ಯಕ್ಷರು ಸಂತಸ ವ್ಯಕ್ತ ಪಡಿಸಿದರು.ರಾಜ್ಯದ ವಿಶ್ವವಿದ್ಯಾಲಯದ ಸಿಂಡಿಕೇಟ್ ಗೆ ಪರರಾಜ್ಯದವರನ್ನು ನೇಮಿಸಿದನ್ನು ವಿರೋಧಿಸಿ ಕರವೇ ಬೆಂಗಳೂರು ಸೇರಿದಂತೆ ೯ ಜಿಲ್ಲೆಗಳಲ್ಲಿ ಕೈಗೊಂಡಿದ್ದ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ ಎಂದು ನಾರಾಯಣ ಗೌಡರು ಹೇಳಿದರು.ಈ ಸ್ಥಾನಕ್ಕೆ ರಾಜ್ಯದ ಅರ್ಹ ವ್ಯಕ್ತಿಯನ್ನು ನೇಮಿಸಬೇಕೆಂದು ಅಧ್ಯಕ್ಷರು ಒತಾಯಿಸಿದರು. ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅನ್ಯಾಯವಾಗುವಂತಹ ಕ್ರಮಗಳನ್ನು ರಾಜ್ಯಪಾಲರು ಕೈಗೊಂಡರೆ ನಮ್ಮ ಸಂಘಟನೆ ಉಗ್ರ ಪ್ರತಿಭಟನೆ ಮಾಡಿವುದಾಗಿ ಎಚ್ಚರಿಸಿದರು.
|