Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ರಾಜ್ಯಸಭೆಗೆ ಕನ್ನಡಿಗರನ್ನೇ ಆರಿಸಿ...

ಸುದ್ಧಿ ಸಮಾಚಾರ


ಕನ್ನಡ-ಕರ್ನಾಟಕ-ಕನ್ನಡಿಗರ ಹಿತ ಕಾಯುವ  ನಿಟ್ಟಿನಲ್ಲಿ  ಕೇಂದ್ರ ಸರಕಾರದ  ತಾರತಮ್ಯ ಧೋರಣೆಯ ವಿರುದ್ಧ ದನಿಯೆತ್ತಲು  ರಾಜ್ಯಸಭೆಗೆ   ಕನ್ನಡಿಗರನ್ನೇ  ಆಯ್ಕೆ  ಮಾಡಿ, ಚುನಾವಣೆಯ ಸಮಯದಲ್ಲಿ  ರಾಜಕೀಯ ಪಕ್ಷಗಳು  ಕನ್ನಡದ ಹಿತ ಕಾಯುವ  ಭರವಸೆ ನೀಡಿದಂತೆ ನಡೆದುಕೊಳ್ಳಬೇಕೆಂದು  ನಮ್ಮ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಒತ್ತಾಯಿಸಿದ್ದಾರೆ.

 ಹಣ ಹಾಗೂ ಹೈಕಮಾಂಡ್ ಲಾಬಿಯ ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ನಾಡು, ನುಡಿ, ಗಡಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಇನ್ನು ಮುಂದೆ ಈ ರೀತಿಯ ಅನ್ಯಾಯವಾಗದಂತೆ  ತಡೆಗಟ್ಟಬೇಕು ಇದಕ್ಕಾಗಿ ಅಪ್ಪಟ ಕನ್ನಡಿಗರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಎಂದು ರಾಜಕೀಯ ಪಕ್ಷಗಳನ್ನು ನಾರಾಯಣಗೌಡರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

 

ಸುದ್ಧಿ ಸಮಾಚಾರ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ