Karnataka Rashana Vedike
Kuvempu
ico_adhyaksharalEkhaniyinda3.jpg
kvrblog.jpg
Sangatane.jpg

ಎಸ್.ಬಿ.ಐ. ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕನ್ನಡೇತರರ ಆಯ್ಕೆ - ಕ.ರ.ವೇ. ಇಂದ ಪ್ರತಿಭಟನೆ

ಕ.ರ.ವೇ ಹೋರಾಟಗಳು

ಭಾರತೀಯ ಸ್ಟೇಟ್ ಬ್ಯಾಂಕ್ ನ ಕರ್ನಾಟಕ ವಲಯದಲ್ಲಿ ಲಭ್ಯವಿರುವ ಹಾಗು ನ್ಯಾಯಯುತವಾಗಿ ಕನ್ನಡಿಗ ಅಭ್ಯರ್ಥಿಗಳಿಗೆ ದೊರಕಬೇಕಾಗಿದ್ದ ಹುದ್ದೆಗಳು ಪರರಾಜ್ಯದವರ ಪಾಲಾಗಿ, ಕನ್ನಡಿಗ ಸಮುದಾಯಕ್ಕಾಗಿರುವ ಅನ್ಯಾಯದ ವಿರುದ್ಧ ಇಂದು ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯ ಬ್ಯಾಂಕ್ ನ ಮುಖ್ಯ ಕಚೇರಿ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು .
 
ಒಂದು ಘಂಟೆಗೂ ಮಿಗಿಲಾಗಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನಂತರ ಬ್ಯಾಂಕ್ ನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಆಗಿರುವ ಅನ್ಯಾಯಗಳ ಪಟ್ಟಿಯನ್ನು ಆಗ್ರಹ ಪೂರ್ವಕವಾದ ಮನವಿ ಸಲ್ಲಿಸುವುದರ ಮೂಲಕ,  ಬ್ಯಾಂಕು ಕರ್ನಾಟಕದ ತನ್ನ ಎಲ್ಲಾ ಶಾಖೆಗಳಲ್ಲಿ ಖಡ್ಡಾಯವಾಗಿ ಕನ್ನಡಿಗರನ್ನು
ನೇಮಕ ಮಾಡಬೇಕು, ಕರ್ನಾಟಕದಲ್ಲಿನ ತನ್ನ ಎಲ್ಲಾ ಶಾಖೆಗಳಲ್ಲಿ ಕನ್ನಡವನ್ನು ಅನುಷ್ಠಾನ ಗೊಳಿಸಬೇಕು, ಕನ್ನಡ-ಕನ್ನಡಿಗರನ್ನು ಅಸಡ್ಡೆ ಮಾಡಿದರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ವಿರುದ್ಧ ಬೃಹತ್ ಹೋರಾಟ ಹಮ್ಮಿಕೊಳ್ಳಲಿರುವುದಾಗಿ ಎಚ್ಚರಿಕೆ ನೀಡಿದರು
 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ